ರಾಯ ಬಸವ ದಳದದಿಂದ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ
ಸಿಂದಗಿ 05: ಬಸವ ಜಯಂತಿ ನಿಮಿತ್ತ ಮಂಗಳವಾರ ಪಟ್ಟಣದ ಬಸವ ಮಂಟಪದಲ್ಲಿ ತಾಲೂಕಾ ರಾಯ ಬಸವ ದಳದ ವತಿಯಿಂದ ಮಂಗಳವಾರ ವಿಶ್ವ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನಡೆಯಿತು.
ಗುರು ಬಸವಣ್ಣನವರ ಭಾವಚಿತ್ರವನ್ನು ತೊಟ್ಟಿಲಲ್ಲಿ ಹಾಕಿ ಪೂಜೆ ಮಾಡಲಾಯಿತು. ಶರಣೆಯರು ಸೇರಿ ತೊಟ್ಟಿಲು ಕಾರ್ಯಕ್ರಮವನ್ನು ಶ್ರದ್ಧೆಯಿಂದ ನಡೆಸಿಕೊಟ್ಟರು.
ಶೈಲಜಾ ಪಟ್ಟಣಶೆಟ್ಟಿ ಮಾತನಾಡಿ, ಬಸವಣ್ಣನವರು ಈ ಲೋಕಕ್ಕೆ ಕಾರಣಿ ಕರ್ತರಾಗಿ ಅವತರಿಸಿ ಬಂದಿದ್ದಾರೆ. ಅವರ ವಚನ ಸಾಹಿತ್ಯ ನಮಗೆ ಸಂಪತ್ತು ಎಂದು ಹೇಳಿದರು.
ಬಸವಣ್ಣನವರು ಕೊಟ್ಟ ಸಂದೇಶ ಸರ್ವಕಾಲಿಕ. ಇಂತಹ ಶರಣರ ಸಂದೇಶದ ಮೇಲೆ ಜೀವನ ಸಾಗಿಸಿದರೆ ಬದುಕು ಸುಂದರವಾಗುವುದರ ಜತೆಗೆ ಬಸವಣ್ಣನವರು ಕಂಡ ಕಲ್ಯಾಣ ರಾಜ್ಯದ ನಿರ್ಮಾಣವಾಗುವುದು. ಇಂದಿನ ಯುವ ಜನಾಂಗ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೂಡಲಸಂಗಮ ಬಸವಧರ್ಮ ಪೀಠದ ಶ್ರೀ ಸದ್ಗರು ಪ್ರಭುಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಾಲೂಕಾ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶಿವಾನಂದ ಕಲಬುರ್ಗಿ ಸೇರಿದಂತೆ ರಾಜಶ್ರೀ ತಾರಾಪೂರ, ಸೀಮಾ ಕಲಬುರ್ಗಿ, ಸುನಿತಾ ತಾರಾಪೂರ, ಡಾ.ಗೌರಿ ಉತ್ನಾಳ, ನಂದಾ ಅರ್ಜುಣಗಿ, ರಾಜಶ್ರೀ ತಾರಾಪೂರ, ಸುನಿತಾ ತಾರಾಪೂರ, ಸೌಜನ್ಯ ಕಲಬುರ್ಗಿ, ಉಮಾ ಕಲಬುರ್ಗಿ ಹಾಗೂ ಇತರರು ನಡೆಸಿಕೊಟ್ಟರು.