ಇಂಡಿ

ಸಮಾನತೆ ಪಾಲಿಸಿದ ಸಮಾನತೆಯ ಯುಗಪುರುಷ ಬಸವಣ್ಣ: ಬಿರಾದಾರ

ಸಮಾನತೆ ಪಾಲಿಸಿದ ಸಮಾನತೆಯ ಯುಗಪುರುಷ ಬಸವಣ್ಣ: ಬಿರಾದಾರ
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಣೆ ಮಾಡಲಾಯಿತು.

ಇಂಡಿ04:  ಸಮ ಸಮಾಜವನ್ನು ನಿರ್ಮಿಸುವ ಪಣತೊಟ್ಟು ಕಾಯಕ ತತ್ವ ಹೇಳುವ ಮೂಲಕ ಅದಕ್ಕೊಂದು ಸ್ಪರ್ಶ ನೀಡಿದ ಮಹಾಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಎಂದು ಇಂಡಿ ತಾಲೂಕಾ ಬಸವ ಸಮಿತಿ ಅಧ್ಯಕ್ಷ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಸಮಿತಿಯಿಂದ ಹಮ್ಮಿಕೊಂಡ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. 

ವೃತ್ತಿ ಆಧಾರಿತ ಮನುಷ್ಯನ ಗೌರವ, ಘನತೆಯ ಶ್ರೇಣಿಕರಣವನ್ನು ಅಳಿಸಿ ಸಮಾನತೆಯನ್ನು ಪಾಲಿಸಿದ ಸಮಾನತೆಯ ಯುಗಪುರುಷ ಎಂದರು.  

ಸಮಿತಿಯ ಭೀಮಾಶಂಕರ ಪ್ರಚಂಡಿ, ಶಂಕರ ಸವದಿ, ಬಾಳು ಗವಳಿ, ಉಮೇಶ ಲಚ್ಯಾಣ, ರವಿ ಗವಳಿ, ಪ್ರಭು ಶಿರಕನಹಳ್ಳಿ, ಅಪ್ಪು ಪವಾರ, ಮಚೇಂದ್ರ ಕದಮ, ಸಂತೋಷ ಪವಾರ, ಪ್ರವೀಣ ಮಠ, ದೇವೆಂದ್ರ ಕುಂಬಾರ, ಸೋಮು ನಿಂಬರಗಿಮಠ, ಮುನಸಿ ಹದಗಲ್ ಸೇರಿದಂತೆ ಮತ್ತಿತರಿದ್ದರು. 

ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ, ತಾಲೂಕಾ ಆಡಳಿತ ವತಿಯಿಂದ ಎಸಿ ರಾಮಚಂದ್ರ ಗಡಾದೆ, ತಹಸೀಲ್ದಾರ ಚಿದಂಬರ ಕುಲಕರ್ಣಿ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಹಂಜಗಿ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಸೇರಿದಂತೆ ಮತ್ತಿತರರು ಮಾಲಾರೆ​‍್ಣ ಮಾಡಿದರು.  

ಸುದ್ದಿ ಓದಿ