ಧಾರವಾಡ - ಹುಬ್ಬಳ್ಳಿ

ಬಸಪ್ಪ ಕರಿಯಪ್ಪ ಇಟಿಗಟ್ಟಿ ವೃದ್ಧ ಕಾಣೆ

ಬಸಪ್ಪ ಕರಿಯಪ್ಪ ಇಟಿಗಟ್ಟಿ ವೃದ್ಧ ಕಾಣೆ

ಧಾರವಾಡ 12: ವ್ಯಕ್ತಿಯೊಬ್ಬ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ. 

ಧಾರವಾಡ ತಾಲೂಕು ಮಂಡಿಹಾಳ ಗ್ರಾಮದ ನಿವಾಸಿ ಬಸಪ್ಪ ಕರಿಯಪ್ಪ ಇಟಿಗಟ್ಟಿ (76) ಕಾಣೆಯಾದ ವ್ಯಕ್ತಿಯಾಗಿದ್ದು ಮಾನಸಿಕ ಅಸ್ವಸ್ಥನಿದ್ದು ಊರು ಊರು ಭಿಕ್ಷೆ ಬೇಡುತ್ತಾ ತಿರುಗಾಡುತ್ತಿದ್ದನು. ಈತ ಆಗಸ್ಟ್‌  

07ರಂದು ಮನೆಯಿಂದ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಶಾಂತವ್ವ ಇಟಿಗಟ್ಟಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ ಸೆ. 11ರಂದು ದೂರು ದಾಖಲಿಸಿದ್ದಾರೆ  

ಎತ್ತರ 5 ಪುಟ 6 ಇಂಚು ಕೋಲು ಮುಖ ಸಾದಕಪ್ಪು ಮೈಬಣ್ಣ ಮೈಯಿಂದ ಸಾಧಾರಣ ತಲೆಯಲ್ಲಿ ಬಿಳಿ ಕೂದಲು ಕನ್ನಡ ಬಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಧಾರವಾಡ ಗ್ರಾಮೀಣ ಪಿಎಸ್‌ನಂ 9480804345ಕ್ಕೆ ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ