ಕಾಗವಾಡ

ಶಬರಿಮಲೆಗೆ ಬರಿಗಾಲಿನಿಂದ ಗುರುಸ್ವಾಮಿಗಳ ಪಾದಯಾತ್ರೆ

ಶಬರಿಮಲೆಗೆ ಬರಿಗಾಲಿನಿಂದ ಗುರುಸ್ವಾಮಿಗಳ ಪಾದಯಾತ್ರೆ

ಕಾಗವಾಡ 12: ಸ್ವಾಮಿಯೇ ಶರಣಂ ಅಯ್ಯಪ್ಪ! ಎಂಬ ಮಂತ್ರ ಪಠಣದೊಂದಿಗೆ ಕಾಗವಾಡ ತಾಲೂಕಿನ ಉಗಾರ್ ಬುದ್ರುಕ್ ಗ್ರಾಮದಿಂದ ಅಯ್ಯಪ್ಪ ಸ್ವಾಮಿಯವರ ತೀರ್ಥಕ್ಷೇತ್ರವಾದ ಶಬರಿಮಲೆ 1,250 ಕಿಮೀ ಅಂತರದ ವರೆಗೆ ಬರಿಗಾಲಿನಿಂದ ಪಾದಯಾತ್ರೆ ಪ್ರಾರಂಭಿಸಿದ್ದಾರೆ. 

ಬುಧವಾರ ಸಂಜೆ ಉಗಾರ ಮರಗುಬಾಯಿ ದೇವಸ್ಥಾನದಲ್ಲಿ ಸದಲಗಾ ದರಿಖಾನ ಮಠದ ದರಿಖಾನ ಗುರುಗಳು ಇವರ ಸಾನಿಧ್ಯದಲ್ಲಿ ಭಕ್ತಿಪೂರ್ವಕ ಪೂಜೆ ಸಲ್ಲಿಸಿ ಪಾದಯಾತ್ರಿಕರನ್ನು ಬೀಳ್ಕೊಟ್ಟರು.. 

ಉಗಾರ ಬುದ್ರುಕ್ ಗ್ರಾಮದ ಸೋಮನಾಥ್ ಗುರುಸ್ವಾಮಿ ಹಾಗೂ ಶೇಡಬಾಳ ದೀಲೀಪ್ ಗುರುಸ್ವಾಮಿ ಇಬ್ಬರು ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಬುಧವಾರ ಸಂಜೆ ಕಾಲ್ನಡಿಗೆ ಮುಲಕ ತೆರಳಲಿದ್ದಾರೆ. 

ಸೋಮನಾಥ್ ಗುರುಸ್ವಾಮಿ ಪ್ರತಿಕ್ರಿಯೆ: 

ಸೋಮನಾಥ್ ಗುರುಸ್ವಾಮಿ ಮಾತನಾಡುತ್ತ ಅಯ್ಯಪ್ಪ ಸ್ವಾಮಿ ನನ್ನ ಪ್ರತಿಯೊಂದು ಕಣ ಕಣದಲ್ಲಿ ಇದ್ದಾರೆ. ಕಳೆದ ನಾಲ್ಕು ವರ್ಷಗಳು ಬರಿಗಾಲಿನಿಂದ ಅಯ್ಯಪ್ಪ ಸ್ವಾಮಿ ದರ್ಶನ ಪಡೆದುಕೊಂಡಿದ್ದೇನೆ. ಈ ವರ್ಷದ ಐದನೇ ಬಾರಿ ದರ್ಶನ ಪಡೆಯಲು ನಾನು ಹೋಗುತ್ತಿದ್ದೇನೆ. ಯಾವುದೇ ಕಷ್ಟಗಳು ನನಗಿಲ್ಲ ಪ್ರತಿದಿನ ಸುಮಾರು 45 ಕಿಲೋಮೀಟರ್ ಪ್ರಯಾಣ ಮಾಡುವ ನನ್ನ ಗುರಿಯಾಗಿದೆ. ಬರುವ 30 ದಿನಗಳಲ್ಲಿ ನನ್ನ ಪ್ರಯಾಣ ಮಾಡುತ್ತೇನೆ ಎಂದು ಹೇಳಿ ಉಗಾರದಲ್ಲೇ ನನಗೆ ಸದ್ಭಕ್ತರು ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು. ಇದನ್ನು ಆಶೀರ್ವಾದ ಎಂದು ತಿಳಿದುಕೊಳ್ಳುತ್ತೇನೆ ಎಂದರು. 

ಸೋಮನಾಥ್ ಗುರುಸ್ವಾಮಿ ಮತ್ತು ದೀಲೀಪ್ ಗುರುಸ್ವಾಮಿ ಇವರಿಗೆ ಬೀಳ್ಕೊಡಲು ಐನಾಪುರದ ಗುರುಸ್ವಾಮಿ, ಗುರುಪಾದ ಗುರುಸ್ವಾಮಿ  ಸಂತೋಷ ಗುರುಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ