ವೃತ್ತಿಯಲ್ಲಿ ಕ್ಷೌರಿಕ, ದೇಶಭಕ್ತಿಯಲ್ಲಿ ಸದಾ ಮುಂದು - ಜಗದೀಶ್ ಹಡಪದ
ರಾಣೇಬೆನ್ನೂರ,14 : ನಿತ್ಯ ಜೀವನದಲ್ಲಿ ವೃತ್ತಿಯಲ್ಲಿ ಕ್ಷೌರಿಕನಾದರೂ ಸಹ ಪ್ರವೃತ್ತಿಯಲ್ಲಿ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ 55 ವರ್ಷದ ನಗರದ ಆರ್ ಕೆ ಹೇರ್ ಡ್ರೆಸಸ್ ಮಾಲೀಕ ಜಗದೀಶ್ ನಿಂಗಪ್ಪ ಮಾಗೋಡ(ಹಡಪದ) ಎಂಬಾತನು ಅಪ್ಪಟ ದೇಶಾಭಿಮಾನಿಯಾಗಿ ಕಂಗೊಳಿಸುತ್ತಿದ್ದಾನೆ.
ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತಲೆಯ ಮೇಲೆ ಇಲ್ಲವೇ ದೇಹದ ಮೇಲೆ ದೇಶಾಭಿಮಾನದ ಚಿತ್ರ ಬಿಡಿಸಿಕೊಂಡು ನಗರದ ತುಂಬೆಲ್ಲಾ ಓಡಾಡುತ್ತಾ ದೇಶಾಭಿಮಾನ ಮೆರೆಯುತ್ತಿರುವ ಈ ವ್ಯಕ್ತಿ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾನೆ.
ಈ ವರ್ಷ ಅ.15ಕ್ಕೆ ದೇಶ ಭಕ್ತ ಯುವಕನೋರ್ವನು ಕೈಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಓಡುವ ಕಲ್ಪನೆಯ ಚಿತ್ರವನ್ನು ತನ್ನ ತಲೆಯ ಹಿಂಭಾಗದಲ್ಲಿ ಕೂದಲಿನಲ್ಲಿ ನುಣುಪಾಗಿ ಚಿತ್ರಿಸಿಕೊಂಡು ಅಭಿಮಾನ ಪಡುತ್ತಿರುವುದು ಕಾಣಬಹುದಾಗಿದೆ. ಕಳೆದ ಜ.26ರ ಗಣರಾಜ್ಯೋತ್ಸವದ ನಿಮಿತ್ಯ ತನ್ನ ತಲೆಯ ಹಿಂಭಾಗದ ಕೂದಲಿನಲ್ಲಿ ರಾಷ್ಟ್ರ ಧ್ವಜದಲ್ಲಿ ಕೆಳಗೆ ಮತ್ತು ಮೇಲ್ಬಾಗದಲ್ಲಿ "ವಂದೇ ಮಾತರಂ" ಎಂದು ಕೂದಲಲ್ಲಿ ಕತ್ತರಿಸಿಕೊಂಡಿದ್ದು ಹಾಗೆಯೇ ಮಧ್ಯದಲ್ಲಿ ಅಶೋಕ ಚಕ್ರ ಬಿಡಿಸಿಕೊಂಡು ಅಭಿಮಾನ ಮೆರೆದಿದ್ದನ್ನು ಸ್ಮರಿಸಿಕೊಳ್ಳಬಹುದು. ಈ ಹಿಂದೆ ತನ್ನ ತೆಲೆಯಲ್ಲಿ ತಲೆ ಕೂದಲನ್ನು ಆಕಾರ ಬರುವಂತೆ ಕತ್ತರಿಸಿ 73, ಖಓಖ ಹಾಗೂ ರಾಷ್ಟ್ರಧ್ವಜ ಚಿತ್ರ ಬಿಡಿಸಿಕೊಂಡು ಅಭಿಮಾನ ಮೆರೆದಿದ್ದನ್ನು ನೆನಪಿಸಿಕೊಳ್ಳಬಹುದು. ಈ ಹಿಂದೆ ದೇಹದಲ್ಲಿ ,ತಲೆಯಲ್ಲಿ ಭಾರತ, ರಾಷ್ಟ್ರಧ್ವಜ, ಮೇರಾ ಭಾರತ ಮಹಾನ, ಜೈಹಿಂದ, ಭಾರತ, ಇಂಡಿಯಾ, ಋ ಐಓಗಿಇ ಋಆಋ, ಎಂಬಿತ್ಯಾದಿ ಬರಹವನ್ನು ತಲೆ ಮತ್ತು ಮೈಯಲ್ಲಿ ಬಿಡಿಸಿಕೊಂಡು ಅಭಿಮಾನ ಮೆರೆದಿರುವುದು ಶ್ಲಾಘನೀಯವಾಗಿದೆ. ಕ್ಷೌರಿಕ ವೃತ್ತಿಯಲ್ಲಿ ಬಹು ನಿಪುಣರಾಗಿರುವ ಜಗದೀಶರು ತನ್ನ ಎರಡೂ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಇತರರ ಮುಖದ ಕ್ಷೌರ(ಸೇವಿಂಗ) ಮಾಡಿಯೂ ಸಹ ದಾಖಲೆ ಮಾಡಿ ಹೆಸರು ಮಾಡಿದ್ದಾರೆ.
ಕಳೆದ ಮೂರು ದಶಕಗಳಿಂದ ನಿರಂತರ ಈ ಪ್ರವೃತ್ತಿಯಲ್ಲಿ ತೊಡಗಿರುವ ಜಗದೀಶನ ಅಭಿಮಾನಕ್ಕೆ ಅನೇಕ ನಾಗರೀಕರು, ತಾಲೂಕಾಡಳಿತ ಅಭಿನಂದಿಸಿ ಸನ್ಮಾನಿಸುವ ಮೂಲಕ ಗೌರವಿಸುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಜಗದೀಶರನ್ನು ಅಭಿಮಾನದಿಂದ ಕಾಣುವಂತಾಗಿದೆ. ನನಗೆ ದೇಶ, ಸಮಾಜ ಎಂದರೆ ಎಲ್ಲಿಲ್ಲದ ಅಭಿಮಾನ, ನನ್ನ ಜೀವವಿರುವವರೆಗೂ ಈ ದೇಶಕ್ಕಾಗಿ ಏನನ್ನಾದರೂ ಸಣ್ಷದಾದರೂ ಸೇವೆ ಮಾಡಲು ಸಿದ್ದ, ದೇಶಕ್ಕೆ ಅಳಿಲು ಸೇವೆ ಸಲ್ಲಿಸಲು ನನ್ನ ಕೈಲಾದ ಮಟ್ಟಿಗೆ ಜನರಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸಲು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಜನೇವರಿ 26ಕ್ಕೆ ವೈವಿಧ್ಯಮಯವಾಗಿ ಮೈಮೇಲೆ ಮತ್ತು ತಲೆಯಲ್ಲಿ ಹೊಸದೊಂದು ಕಲ್ಪನೆಯ ಚಿತ್ರ ಬಿಡಿಸಿಕೊಂಡು ಅರಿವು ಮೂಡಿಸುತ್ತಿದ್ದೇನೆ.
ಇದೀಗ ಮೊಬೈಲ್ ಯುಗ ಆರಂಭವಾಗಿದ್ದು, ಬಹುತೇಕ ಯುವಕ ಯುವತಿಯರು ಮೊಬೈಲ್ ನಲ್ಲಿಯೇ ಹೆಚ್ಚಿನ ಸಮಯ ಕಾಲಹರಣ ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ದೇಶದ ಹಾಗೂ ಸಮಾಜದ ಒಳತಿಗಾಗಿ ಅಭಿಮಾನ ಇಟ್ಟುಕೊಂಡು ಪ್ರಾಮಾಣಿಕ ಹಾಗೂ ನಿಷ್ಕಲ್ಮಶವಾಗಿ ಸೇವೆ ಮಾಡುವ ಅವಕಾಶವನ್ನು ಎಲ್ಲರೂ ಕಲ್ಪಿಸಿಕೊಂಡು ಮುನ್ನಡೆದರೆ ಆರೋಗ್ಯಯುತ ಅಭಿಮಾನ ಎಲ್ಲರಲ್ಲೂ ಬರುತ್ತದೆ ಎನ್ನುತ್ತಾರೆ.
ಇದರಿಂದ ಸರ್ವರಲ್ಲೂ ದೇಶಾಭಿಮಾನ ಬಂದರೆ ನನಗೆ ಬಹಳಷ್ಟು ಹೆಮ್ಮೆಯಾಗುತ್ತದೆ, ಎಲ್ಲರೂ ದೇಶಾಭಿಮಾನ ಮೂಡಿಸಿಕೊಂಡು ದೇಶವನ್ನು ರಕ್ಷಿಸಲು ಮುಂದಾಗಬೇಕಾಗಿದೆ ಎಂದು ಜಗದೀಶ ಅಭಿಮಾನದಿಂದ ಹಾಗೂ ಕಳಕಳಿಯಿಂದ ಅಭಿಪ್ರಾಯಿಸುತ್ತಾರೆ ಅಲ್ಲದೇ ಇದೊಂದು ನನಗೆ ಒದಗಿ ಬಂದಿರುವ ಭಾಗ್ಯ ಎಂದು ಜಗದೀಶ ಹೆಮ್ಮೆಯಿಂದಲೇ ಹೇಳುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ