ಬಾಪೂಜಿ ಕೊಡುಗೆ ಅವಿಸ್ಮರಣಿ: ಖನಗಾವಿ
ಇಂಡಿ: ಗಾಂಧೀಜಿಯ ಕನಸಿನ ಸಿದ್ಧಾಂತ ಜನರ ಅಭಿವೃದ್ಧಿಗೆ ಮಾತ್ರ ಮೀಸಲಾಗದೆ ವ್ಯಕ್ತಿಯಿಂದ ದೇಶ ಕೂಡ ಪ್ರಗತಿ ಪಥದ ಕಡೆಗೆ ಸಾಗುವಂತೆ ಮಾಡುವ ಒಂದು ಮಹತ್ವದ ಕಾರ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಹೇಳಿದರು.
ಅವರು ಭಾನುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹುತಾತ್ಮರ ದಿನದ ನಿಮಿತ್ಯ ನಡೆದ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೋರ್ಟು ಆವರಣ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿವಾಣಿ ನ್ಯಾಯಾಧೀಶ ಎ.ಎಚ್.ಖನಗಾವಿ ಮಾತನಾಡಿ ಗ್ರಾಮ ಸ್ವರಾಜ್ಯದ ಹರಿಕಾರ, ಸಾಮಾಜಿಕ ಸಂತರಾದ ಬಾಪೂಜಿ ಕೊಡುಗೆ ಅವಿಸ್ಮರಣಿಯ ಎಂದರು.
ಹೆಚ್ಚು ದಿವಾನಿ ನ್ಯಾಯಾಧೀಶ ಹುಲಿಗೆಪ್ಪ.ಡಿ, ವಕೀಲರ ಸಂಘದ ಅಧ್ಯಕ್ಷ ಪುಟ್ಟಣಗೌಡ ಪಾಟೀಲ, ಕಾರ್ಯದರ್ಶಿ ಎಸ್.ಆರ್. ಬಿರಾದಾರ ಮಾತನಾಡಿದರು.
ಬಿ.ಬಿ.ಬಿರಾದಾರ, ಸೋಮು ನಿಂಬರಗಿಮಠ, ಎಸ್.ಪಿ. ಪಾಟೀಲ, ಪ್ರದೀಪ ಮೂರಮನ್, ವೈ.ಎಸ್.ಪೂಜಾರಿ, ಎಸ್.ಬಿ. ಕೆಂಬೋಗಿ, ನಾಡಪುರೋಹಿತ, ವಿ.ಎಸ್. ಚಲವಾದಿ, ಮಹಾಂತೇಶ ಪಾಟೀಲ, ರಮೇಶ ಕೋಳಿ, ಜೆ.ಜೆ. ಜೇವೂರ, ಪುರಸಭೆ ಆರೋಗ್ಯಾಧಿಕಾರಿ ಸೋಮಾ ನಾಯಕ ಮತ್ತಿತರಿದ್ದರು.
ಪೋಟೊ ಕ್ಯಾಪ್ಸನ್ 30 ಇಂಡಿ 01ಎ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹುತಾತ್ಮರ ದಿನದ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಮಾತನಾಡುತ್ತಿರುವುದು.