ಶಿಗ್ಗಾವ್

ಮುಂದಿನ ದಿನಗಳಲ್ಲಿ ಬಂಕಾಪುರ ಚಲೋ ಕಾರ್ಯಕ್ರಮ: ಪ್ರಮೋದ ಮುತಾಲಿಕ

ಮುಂದಿನ ದಿನಗಳಲ್ಲಿ ಬಂಕಾಪುರ ಚಲೋ ಕಾರ್ಯಕ್ರಮ: ಪ್ರಮೋದ ಮುತಾಲಿಕ

ಶಿಗ್ಗಾವಿ 11: ಈ ಕ್ಷೇತ್ರದ ಮಾಜಿ ಮುಖ್ಯ ಮಂತ್ರಿ ಸೇರಿದಂತೆ ಇಂದಿನ ಸರ್ಕಾರ ತಮ್ಮ ರಾಜಕೀಯದ ಸ್ವಾರ್ಥಕ್ಕಾಗಿ ಬಂಕಾಪುರದಲ್ಲಿ ಒಂದು ಜ್ವಲಂತ ಸಮಸ್ಯೆಯನ್ನು ಜೀವಂತಾಗಿಟ್ಟಿದ್ದಾರೆ, ಇದರಲ್ಲಿ ಪೊಲೀಸ ಇಲಾಖೆಯ ಪಾತ್ರವು ಇದ್ದು ಈ ಕುರಿತು ಹೋರಾಟ ಮಾಡಲು ಮುಂದಿನ ದಿನಗಳಲ್ಲಿ ಬಂಕಾಪುರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ಪ್ರಮೋದ ಮುತಾಲಿಕ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಸ್ತೆ ಅಗಲೀಕರಣದಂತ ಅಭಿವೃದ್ದಿಕಾರ್ಯ ನಡೆಯುವಾಗ ದೇವಸ್ಥಾನ, ಚರ್ಚು, ಮಸೀದಿ, ವಾಣಿಜ್ಯ ಮಳಿಗೆಗಳಿದ್ದರೂ ಸುಪ್ರಿಂಕೋರ್ಟ ಸ್ಪಷ್ಟ ಆದೇಶದಂತೆ  ಅವುಗಳನ್ನು ತೆರವು ಗೊಳಿಸಬೇಕು. ಆದರೆ ಬಂಕಾಪುರದಲ್ಲಿ ರಸ್ಥೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಮಸೀದಿಯನ್ನು ತೆರುವು ಮಾಡದಿರಲು ಕಾರಣವೇನು? ಅಭಿವೃದ್ದಿಕಾರ್ಯಕ್ಕೆ ಅಡ್ಡಿ ಮಾಡುತ್ತಿರುವವರು ಯಾರು? ಶ್ರೀರಾಮ ಸೇನೆ ತನ್ನ ಹೋರಾಟದ ಮೂಲಕ ಅದನ್ನುತೆರವು ಮಾಡ ಬೇಕೆ? ಎಂದು ಪ್ರಶ್ನಿಸಿದರು. 

ಸುಪ್ರೀಂಕೋರ್ಟ ಆದೇಶವನ್ನು ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಮತ್ತು ಇಲಾಖೆ ಉಲ್ಲಂಘನೆ ಮಾಡಿವೆ. ಕಾನೂನು, ಸಂವಿಧಾನ, ಕೋರ್ಟಿನಿ ನಿಯಮವನ್ನು ಪಾಲನೆ ಮಾಡದೆ ನಾಗರಿಕರ ನೆಮ್ಮದಿ ಕೇಡು ಮಾಡುವವರನ್ನು ಬಂಧಿಸಿ ಒಳಗೆ ಹಾಕಿ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದಂತೆ ಪೊಲೀಸ್ ಇಲಾಖೆ ತಮಗೆ ನೀಡಿರುವ ಬಂದೂಕುಗಳನ್ನು ಬಳಸಿ ಸಮಾಜದಲ್ಲಿ ಅನಾಹುತ ಸೃಷ್ಟಿಸುವ ದುಷ್ಟ ಶಕ್ತಿಗಳಿಗೆ ಉತ್ತರಕೊಡಬೇಕು ಎಂದರು. 

ಸುಪ್ರೀಂಕೋರ್ಟ ಆದೇಶ ಸರ್ವೋಚ್ಚವಾದುದಾಗಿದ್ದು, ಅದರ ಆದೇಶದ ನಂತರವೂ ಕೆಳ ಹಂತದ ನ್ಯಾಯಾಲಯಗಳಲ್ಲಿ ಅಫೀಲ ಮಾಡುವುದಾಗಲಿ ಸ್ಟೇ ತರುವುದಾಗಲಿ ಸಾಧ್ಯವಿಲ್ಲಾ, ಬಂಕಾಪುರ ಠೋಕರಶಾವಲಿ ದರ್ಗಾ ವಿವಾಧ ನ್ಯಾಯಾಲಯದಲ್ಲಿದೆ ಎಂದು ಹೇಳುವವನು ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥ ಎಂದರು. 

ನೇಹಾ ಹತ್ಯಪ್ರಕರಣದ ನಂತರ ಮಹಿಳೆಯರ ರಕ್ಷಣೆಗಾಗಿ ಸಹಾಯವಾಣಿ ಪ್ರಾರಂಭಿಸಿದ ನಂತರ ಲವ್ ಜೀಹಾದನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳ ಕರೆಗಳು 70ಕ್ಕಿಂತ ಹೆಚ್ಚು ಕರೆಗಳು ಬಂದಿದ್ದು 32 ಹುಡುಗಿಯರನ್ನು ರಕ್ಷಿಸಿ ತಮ್ಮ ಕುಟುಂಬಗಳನ್ನು ಸೇರಿಕೊಳ್ಳುವಂತೆ ಮಾಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಲವ್ ಜಿಹಾದ್ ವೇಗವಾಗಿ ಕೆಲಸ ಮಾಡುತ್ತಿದ್ದು, ಸಂಕಷ್ಟದ ಸ್ಥಿತಿಯಲ್ಲಿದ್ದ ಇಲ್ಲಿಯವರಗೆ ಸುಮಾರು 100 ಹುಡುಗಿಯರನ್ನು ರಕ್ಷಿಸಿ ಕರೆತಂದು ಅವರ ಕುಟುಂಬಕ್ಕೆ ಸೇರಿಸಲಾಗಿದೆ ಎಂದು ಪ್ರಮೋದ ಮುತಾಲಿಕ್ ಹೇಳಿದರು. 


ಸುದ್ದಿ ಓದಿ