ಅಂಬ್ಯುಲನ್ಸ್ ಖರೀದಿಗೆ ಬ್ಯಾಂಕಿನ ಧನಸಹಾಯ ಬಂದಿದೆ : ಸೇವಾ ಭಾರತಿ ಸ್ಪಷ್ಟನೆ
ಗುಳೇದಗುಡ್ಡ18: ಸೇವಾ ಭಾರತಿಯ ಸಂಚಾರಿ ಚಿಕಿತ್ಸಾಲಯಕ್ಕೆ ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಿತಿಯಿಂದ ಅಂಬ್ಯುಲನ್ಸ್ ಖರೀದಿಗಾಗಿ ಅಗಸ್ಟ್ 2019 ರಲ್ಲಿಯೇ ವಾಹನದ ಪೂರ್ಣ ಮೊತ್ತ ಬಂದಿದೆ. ಆದರೆ ಅದನ್ನು ಖರೀದಿಸಲು ತಡವಾಗಿದೆ ಎಂದು ಇಲ್ಲಿನ ಸೇವಾ ಭಾರತಿಯ ಅಧ್ಯಕ್ಷ ಸಂಜಯ ಕಾರಕೂನ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿ, ಸೇವಾಭಾರತಿಗೆ ಧನ ಸಹಾಯ ತಲುಪಿದ ತಕ್ಷಣ ಖರೀದಿಗೆ ಪ್ರಯತ್ನಿಸಿದರೂ ತಾಂತ್ರಿಕ ತೊಂದರೆಯಿಂದ ತಡವಾಗಿದೆ. ಶೀಘ್ರವಾಗಿ ಅಂಬ್ಯುಲನ್ಸ್ ವಾಹನ ಬರಲಿದ್ದೂ ಸೇವಾಭಾರತಿ ಕಾರ್ಯಕ್ಕೆ ಅರ್ಿಸಲಾಗುತ್ತದೆ. ಆದರೆ ವಿಷಯ ತಿಳಿಯದೇ ಸೇವಾಸಕ್ತ ಸಂಸ್ಥೆಗಳ ಮೇಲೆ ಅನ್ಯತಾ ಆರೋಪ ಮಾಡುವುದು ಸರಿಯಲ್ಲವೆಂದು ಸೇವಾ ಭಾರತಿಯ ಅಧ್ಯಕ್ಷ ಸಂಜಯ ಕಾರಕೂನ್ ಸ್ಪಷ್ಟಪಡಿಸಿದ್ದಾರೆ.