ಬೆಂಗಳೂರಿನ ಕ್ಯಾಂಪಸ್ ಕ್ಲಿಕ್: ಪರ್ಸನಾಲಿಟಿ ಡೆವಲಪ್ಮೆಂಟ್
ರಾಣೇಬೆನ್ನೂರು11: ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಕಾಲೇಜು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ನಿರ್ಮಾಣ ಮತ್ತು ಬೆಳವಣಿಗೆ ಕುರಿತಂತೆ ತರಬೇತಿ ಕಾರ್ಯಗಾರವು ನಡೆಯಿತು. ಕಾರ್ಯಗಾರದಲ್ಲಿ, 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ಯಾಂಪಸ್ ಕ್ಲಿಕ್ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ತರಬೇತುದಾರರಾದ ಎಂ.ಟಿ. ಅರಸು ಅವರು, ಪಾಲ್ಗೊಂಡು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ತರಬೇತಿ ಮತ್ತು ಉದ್ಯೋಗಾಧಿಕಾರಿ ಡಾ: ಡಿ.ಎಸ್. ವಿಶ್ವನಾಥ, ಡಾ: ಎಸ್. ಜಿ.ಮಾಕನೊರ, ಪ್ರೊ: ಕೆ.ಎನ್. ದಾನೇಶ್, ಪ್ರೊ: ಎನ್. ಲೋಕೇಶ್ ಸೇರಿದಂತೆ ಮಹಾವಿದ್ಯಾಲಯದ, ಮತ್ತಿತರೆ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.