ಗೋಕಾಕ್

ದಿ.18ರಿಂದ ತವಗಮಠದ ಬಾಳಯ್ಯಜ್ಜನ ಜಾತ್ರೆ

ದಿ.18ರಿಂದ ತವಗಮಠದ ಬಾಳಯ್ಯಜ್ಜನ ಜಾತ್ರೆ
ತವಗಮಠದ ಶ್ರೀ ಸದ್ಗುರು ಬಾಳಯ್ಯ ಮಹಾಸ್ವಾಮಿಜಿಯವರು.

ಘಟಪ್ರಭಾ 17: ಸಮೀಪದ ತವಗ ಗ್ರಾಮದ ಮಠವು ಪಂಚಮಠಗಳಲ್ಲಿ ಒಂದಾದ ಶ್ರೀ ಕ್ಷೇತ್ರ ತವಗಮಠದ ಸದ್ಗುರು ಬಾಳಯ್ಯ ಮಹಾಸ್ವಾಮಿಗಳ ಶಿವರಾತ್ರಿ ಜಾತ್ರಾ ಮಹೋತ್ಸವವು ದಿ.18 ಮತ್ತು 19 ರಂದು ಜರುಗಲಿದೆ.

ದಿ.18ರಂದು ಗದ್ದುಗೆ ಪೂಜಾಭಿಷೇಕ ನಂತರ ಸಂಜೆ ಸಕಲವಾದ್ಯ ಮೇಳಗಳೊಂದಿಗೆ ದೇವರುಗಳನ್ನು ಕರೆ ತರುವುದು. ದಿ.19ರಂದು ಮುಂಜಾನೆ ಪ್ರಸಾದ ಪೂಜೆಯೊಂದಿಗೆ ಮಹಾದಾಸೋಹ ಪ್ರಾರಂಭವಾಗುವುದು. ಮಧ್ಯಾಹ್ನ ಪಂಚಮ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಮಹಾಸ್ವಾಮಿಗಳವರ ತುಲಾಭಾರವನ್ನು ಶರಣ ಬಾಳೇಶ ಬೊಂಬ್ರಿ ಎಂ,ಮಲ್ಲಾಪೂರ ಇವರಿಂದ ಮತ್ತು ಕಲ್ಲು ಸಕ್ಕರೆ ತುಲಾಭಾರ ಸೇವೆಯನ್ನು ಅಮವಾಸ್ಯೆ ಮಹಾದಾಸೋಹ ಮಂಡಳಿಯವರಿಂದ ಜರುಗಲಿದೆ. ಸಂಜೆ ಶ್ರೀಗಳ ನುಡಿ ಕಾರ್ಯಕ್ರಮ ನಂತರ ರಾತ್ರಿ ಬೈಲಾಟ ಕಾರ್ಯಕ್ರಮ ಜರುಗಲಿದೆ. ದಿ.20ರಂದು ಶ್ರೀಗಳ ಆಶೀರ್ವಾದ ಮತ್ತು ದೇವರುಗಳ ಬೀಳ್ಕೊಡುವ ಸಮಾರಂಭ ಜರುಗಲಿದೆ. ಕಾರ್ಯಕ್ರಮಕ್ಕೆ ಸದ್ಭಕ್ತರು ತನು,ಮನ,ಧನದಿಂದ ಸೇವೆ ಸಲ್ಲಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪಂಚಮ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಮಹಾಸ್ವಾಮಿಜಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಸುದ್ದಿ ಓದಿ