ಕಾಗವಾಡ

ಬಾಳಾಸಾಹೇಬ ಪಾಟೀಲ ನಿಧನ

ಬಾಳಾಸಾಹೇಬ ಪಾಟೀಲ ನಿಧನ

ಕಾಗವಾಡ ನವೆಂಬರ್ 04: ವಾಯು ವಿಹಾರಕ್ಕಾಗಿ ಹೋದ ಉಗಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಮಾಜಿ ಅಧ್ಯಕ್ಷರು, ನಿವೃತ್ತ ಕಾರ್ಮಿಕರಾದ ಬಾಳಾಸಾಹೇಬ ವಿಠೋಬಾ ಪಾಟೀಲ(65) ಇವರಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸಗೆ ಮಿರಜ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೆ ಮೃತಪಟ್ಟ ಘಟಣೆ ಸಂಭವಿಸಿದೆ.

ಮೊಳವಾಡ ಗ್ರಾಮದ ಮಲಗೌಡಾ ಬಸಗೌಡಾ ಬಿರಾದಾರ ಎಂಬಾತ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಈತನ ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್‍ಐ ಹನುಮಂತ ಧರ್ಮಟ್ಟಿ ತನಿಖೆ ಕೈಗೊಂಡಿದ್ದಾರೆ.

ಬಾಳಾಸಾಹೇಬ ಪಾಟೀಲ ಇವರಿಗೆ ಒಬ್ಬ ಪುತ್ರ ನಿದ್ದು, ದುಬೈ ಅಬು-ದಾಬಿಯಲ್ಲಿ ಸೇವೆಯಲ್ಲಿದ್ದಾನೆ. ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರೀಯೆಯಲ್ಲಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಉಗಾರ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಸುದ್ದಿ ಓದಿ