ರಾಣೆಬೆನ್ನೂರ

ಸ್ವಾತಂತ್ರ್ಯ ಜನ ಸಂಗ್ರಾಮಕ್ಕೆ ಬಾಲಗಂಗಾಧರನಾಥ ತಿಲಕರ ಕೊಡುಗೆ ಅನನ್ಯ: ರಂಭಾಪುರಿ ಶ್ರೀಗಳು

ಸ್ವಾತಂತ್ರ್ಯ ಜನ ಸಂಗ್ರಾಮಕ್ಕೆ ಬಾಲಗಂಗಾಧರನಾಥ ತಿಲಕರ ಕೊಡುಗೆ ಅನನ್ಯ: ರಂಭಾಪುರಿ ಶ್ರೀಗಳು

ರಾಣೆಬೆನ್ನೂರು 20:  ಭಾರತೀಯರು ಸ್ವಾಭಿಮಾನಿಗಳು,ಧರ್ಮದ ಆರಾಧಕರು, ಯಾವುದೇ ಜಾತಿ ಮತ ಬೇಧ ಭಾವವೆಣಿಸದೇ, ಹಬ್ಬ,-ಹರಿದಿನಗಳು, ಜಾತ್ರೆ-ಉತ್ಸವಗಳು ಆಚರಿಸುವುದರ ಮೂಲಕ, ಭಾವೈಕ್ಯತೆಯನ್ನು ಬಿಂಬಿಸಿದ ವರಾಗಿದ್ದಾರೆ ಎಂದು ಬಾಳೆಹೊನ್ನೂರು  ರಂಭಾಪುರಿ ಪೀಠದ ಜಗದ್ಗುರು ಡಾ:  ವೀರ ಸೋಮೇಶ್ವರ ದೇಶೀಕೇಂದ್ರ ಮಹಾಸ್ವಾಮಿಗಳವರು ನುಡಿದರು. ಅವರು ಸೋಮವಾರ ನಗರಸಭಾ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆ ಪ್ರತಿಷ್ಠಾಪಿಸಿರುವ, ದಶಾವತಾರ ಗಣೇಶ್ ಮಹಾ ಮಂಟಪಕ್ಕೆ ದರ್ಶನವಿತ್ತು, ಪೂಜೆ ಸಲ್ಲಿಸಿ, ಮಾತನಾಡಿದರು. ಪ್ರಸ್ತುತ ಆಧುನಿಕತೆಯತ್ತ ಸಾಗುತ್ತಿರುವ  ಮನುಷ್ಯನ ಬದುಕು, ಶಾಂತಿ-ನೆಮ್ಮದಿ ಕಾಣದಾಗಿದೆ. ಧರ್ಮದರ್ಶನ ದೂರಾಗಿ, ದೂರದರ್ಶನ ಹತ್ತಿರವಾಗುತ್ತಲಿದೆ ಪರಿಣಾಮ ಭಾವೈಕ್ಯತೆಯ ಭಾರತ ಛಿದ್ರವಾಗುತ್ತಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಬಹುಸಂಸ್ಕೃತಿ ಭಾರತೀಯರಲ್ಲಿ ಮಾತ್ರ ಇದೆ, ಗಣೇಶ ಅತ್ಯಂತ ಬುದ್ಧಿಶಾಲಿ ಮತ್ತು ಶಕ್ತಿಶಾಲಿ ಗಣೇಶನನ್ನು ಎಲ್ಲ ಧರ್ಮಿಯರು ಪೂಜಿಸುತ್ತಾರೆ, ವಿಘ್ನೇಶ್ವರನಿಗೆ ಮೊದಲ ಪೂಜೆ, ತಲತಲಾಂತರದಿಂದ ಹಿಂದೂಗಳು ಸಹ ಸಂಪ್ರದಾಯಬದ್ಧವಾಗಿ ಮೊಹರಂ ಹಬ್ಬವನ್ನು ಆಚರಿಸುವ ಪರಿಪಾಠ ಸಮಾಜದಲ್ಲಿದೆ ಎಂದರು  ಯುವಕರು ಇತಿಹಾಸವನ್ನು ಅರಿತುಕೊಂಡು, ಭಾರತದ ಸಂಸ್ಕೃತಿ ಪರಂಪರೆ, ಆಚರಣೆ ಮಾಡುತ್ತಾ, ಧರ್ಮಾಭಿಮಾನ  ಬೆಳೆಸಲು ಮತ್ತು ಅದನ್ನು ಇತಿಹಾಸ ಪುನರುತ್ಥಾನ ಗೊಳಿಸಲು ಮುಂದಾಗಬೇಕಾದ ಇಂದಿನ ಬಹು ಅಗತ್ಯವಿದೆ, ಅಂತಹ ಪವಿತ್ರವಾದ ಕಾರ್ಯವು ವಂದೇಮಾತರಂ ಸಂಸ್ಥೆಯವರು, ನಿರಂತರವಾಗಿ ಆಚರಿಸುತ್ತಾ,ಅನುಷ್ಠಾನಗೊಳಿಸುವತ್ತಾ, ಸಾಗುತ್ತಿರುವುದು, ಜಗದ್ಗುರು ಪೀಠವು ಅತ್ಯಂತ ಸಂತೋಷ ಪಡುತ್ತದೆ ಎಂದರು. ವೇದ ಇತಿಹಾಸ ಕಾಲದಿಂದಲೂ, ಎಲ್ಲ ಜನಾಂಗದವರು ಇದ್ದಾರೆ, ಸ್ವಾತಂತ್ರ್ಯಾನಂತರವೂ  ಒಂದಾಗಿ ಒಗ್ಗಟ್ಟಾಗಿ, ಜೀವಿಸುತ್ತಿದ್ದಾರೆ, ಕೆಲವು ರಾಜಕಾರಣಿಗಳಿಂದಾಗಿ, ಜಾತಿ, ಜಾತಿಗಳ ಮಧ್ಯೆ ಜಗಳವಾಗುತ್ತಲಿದೆ.  

ರಾಜಕೀಯ ಕ್ಷೋಭೆ ಹೆಚ್ಚಾಗುತ್ತಿದೆ. ಜಗದ್ಗುರು ಪೀಠವು, ಇದಕ್ಕೆ ಎಂದಿಗೂ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ಅವರು ಜಗದ್ಗುರುಗಳಿಗೆ ಭಕ್ತಿ ಸಮರೆ​‍್ಣಯ ಮೂಲಕ, ,ಸ್ವಾಗತಿಸಿ, ಗೌರವಿಸಿ ಸನ್ಮಾನಿಸಿದರು. ಸಂಕೊಳ್ಳಿ ಸುಕ್ಷೇತ್ರ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ದಿವ್ಯ ನೇತ್ರತ್ವದಲ್ಲಿದ್ದರು. ಕಾರ್ಯಕ್ರಮದಲ್ಲಿ, ನಗರಸಭಾ ಅಧ್ಯಕ್ಷ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ, ಸಾಯಿ ಸಮಿತಿ ಅಧ್ಯಕ್ಷ, ಸಿದ್ದಪ್ಪ ಭಾಗಲದವರ, ಬಜರಂಗದಳದ ಅಜಯ ಮಠದ, ರಾಘವೇಂದ್ರ ಚಿನ್ನಿಕಟ್ಟಿ, ಮಂಜುನಾಥ್ ಬುರಡಿಕಟ್ಟಿ, ಕಿರಣ ಅಂಗಡಿ, ವೀರೇಶ್ ಹೆದ್ದೇರಿ, ಜಯಶ್ರೀ ಪಿಸೆ, ಗಣೇಶ್ ಬುರುಡಿಕಟ್ಟೆ, ವಿನಯಗೌಡ ಬಾಳನಗೌಡ್ರ, ಶಿವಕುಮಾರ್ ಗೌಡ ಶಿವಣ್ಣನವರ, ಪ್ರಮೋದ್ ಯಲವಟ್ಟಿ, ಕಿರಣ್ ತೋಟಪ್ಪನವರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು,ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ