ಬಕ್ರಿದ್: ಕೊರೊನಾ ನಿಯಮಗಳ ಪಾಲನೆ ಮಾಡಿ: ಪಟಾತಾರ
ಗುಳೇದಗುಡ್ಡ,ಜು.16 : ನಮ್ಮದು ಭಾವೈಕ್ಯತೆಯ ನಾಡು. ಪ್ರತಿಯೊಬ್ಬರೂ ಎಲ್ಲ ಹಬ್ಬ ಹರಿದಿನಗಳನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡುತ್ತೇವೆ. ನಮ್ಮ ಭಾರತೀಯ ಸಂಪ್ರದಾಯ, ಆಚರಣೆಗಳಿಗೆ ತಮ್ಮದೇ ಆದ ಮಹತ್ವವಿದೆ. ಇದೇ ಜುಲೈ 21 ರಂದು ಪವಿತ್ರ ಬಕ್ರಿದ್ ಹಬ್ಬದ ಆಚರಣೆ ನಡೆಯಲಿದೆ.ಎಲ್ಲರೂ ಕೊರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಬಕ್ರಿದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಬೇಕೆಂದು ಪಿಎಸ್‌ಆಯ್ ಪುಂಡಲಿಕ ಪಟಾತಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪವಿತ್ರ ಬಕ್ರಿದ್ ಹಬ್ಬದ ಶಾಂತಿ ಪಾಲನಾ ಸಭೆ ನಡೆಯಿತು.
ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಮತನಾಡುತ್ತಾ ಭಾರತೀಯರನಾದ ನಾವು ಪ್ರತಿಯೊಂದು ಹಬ್ಬಗಳನ್ನು ಕೂಡಾ ಅತ್ಯಂತ ಶಾಂತ ರೀತಿಯಿಂದ ಆಚರಣೆ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಬೇಧಭಾವವಿಲ್ಲ. ಪ್ರತಿ ವರ್ಷ ಎಲ್ಲರೂ ಪರಸ್ಪರ ಪ್ರೀತಿಯಿಂದ ಹಬ್ಬವನ್ನು ಆಚರಣೆ ಮಾಡುತ್ತೇವೆಂದು ಹೇಳಿದರು.
ಮುಖಂಡ ಜಮೀರ ಮೌಲ್ವಿ, ರೆಡ್ಡಿ ಸರ್, ಪ್ರಶಾಂತ ಜವಳಿ, ಪ್ರಕಾಶ ಮುರುಗೋಡ, ಚಾಂದ ಹನಮಸಾಗರ ಮಾತನಾಡಿದರು.
ಉಪ ತಹಶೀಲ್ದಾರ ವಿರೇಶ ಬಡಿಗೇರ, ಮುಖಂಡ ಗೋಪಾಲ ಭಟ್ಟಡ, ರಫೀಕ್ ಸೂಳಿಬಾವಿ, ನಜೀರ ಕೊತ್ತಲ, ಆನಂದ ತಿಪ್ಪಾ, ಸಂಗಪ್ಪ ಆಲೂರು, ರಾಘು ಪತ್ತಾರ, ರಾಜು ಸಂಗಮ, ಮಹಾಂತೇಶ ಲಕ್ಕುಂಡಿ, ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಆನಂದ ಮನ್ನಿಕಟ್ಟಿ, ಸಿ.ಎಚ್.ಕಿರಸೂರ, ಎಸ್.ಸಿ.ಕೋಟಿ, ಆನಂದ ಬಿಂಜವಾಡಗಿ, ಎಸ್.ಆಯ್.ಡಂಗಿ ಸೇರಿದಂತೆ ಇತರರು ಶಾಂತಿ ಪಾಲನಾ ಸಭೆಯಲ್ಲಿ ಇದ್ದರು.