ಇಂಡಿ

ಪ್ರತಿಯೊಂದು ಪ್ರಶ್ನೆ ಮಾಡುವ ಗುಣವಿದ್ದರೆ ಅದು ಸಂಶೋಧನೆಗೆ ಕಾರಣ: ಅಕ್ಕಿ

ಪ್ರತಿಯೊಂದು ಪ್ರಶ್ನೆ ಮಾಡುವ ಗುಣವಿದ್ದರೆ ಅದು ಸಂಶೋಧನೆಗೆ ಕಾರಣ: ಅಕ್ಕಿ

ಇಂಡಿ ??: ನಮ್ಮ ದೈನಂದಿನ ಬದುಕಿನಲ್ಲಿ ಕುತೂಹಲ ಕಣ್ಣುಗಳು ಇದ್ದರೆ ಹಾಗೂ ಪ್ರತಿಯೊಂದು ಪ್ರಶ್ನೆ ಮಾಡುವ ಗುಣವಿದ್ದರೆ ಅದು ಸಂಶೋಧನೆಗೆ ಕಾರಣವಾಗುತ್ತದೆ ಎಂದು ಡಿ.ಎನ್‌. ಅಕ್ಕಿ ಅಭಿಪ್ರಾಯಪಟ್ಟರು. 

ಶನಿವಾರ ತಾಲೂಕಿನ ನಾದ ಕೆ.ಡಿ. ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬ್ಯಾಗ್ ಲೆಸೆ ಡೇ ಕಾರ‌್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು, 

ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯುವ ಪ್ರತಿ ಚಟುವಟಿಕೆಗಳಿಗೆ ಪ್ರಶ್ನೆ ಮಾಡಬೇಕು ಹೊರತು ಹಾಗೇ ಒಪ್ಪಿಕೊಳ್ಳಬಾರದು ಎಂದರು. 

ಸಾಲೋಟಗಿಯ ಕವಿ ಗೀತಯೋಗಿ ಮಾತನಾಡಿ, ಕಾವ್ಯ ಒಂದು ಕಾನನದಂತೆ ಅಲ್ಲಿ ಎಲ್ಲ ವೈಶಿಷ್ಟ್ಯ ಇರುತ್ತದೆ ಆದರೆ ತಾವು ಏನನ್ನೂ ಗಮನಿಸುತ್ತೀರೋ ಅದು ಕಾವ್ಯದ ವಸ್ತು ಆಗುತ್ತದೆ ಎಂದು ವೀಕ್ಷಣೆ ಕಾವ್ಯಕ್ಕೆ ಪ್ರೇರಣೆ ಎಂದರು. 

ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಗುರು ಸಿ.ಎಂ. ಬಂಡಗಾರ, ಸಾಹಿತ್ಯ ಎಂಬುವುದು ಒಂದು ಅಭಿವ್ಯಕ್ತಿ ಅದನ್ನು ಕಾವ್ಯ, ಕಥೆ, ಕಾದಂಬರಿ, ನಾಟಕಗಳ ಮೂಲಕ ಅಭಿವ್ಯಕ್ತಿ ಪಟಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ತೊಡಗಬೇಕು ಎಂದರು. 

ಪಂಡಿತ ಅವಜಿ ಮಾತನಾಡಿ, ನಾಟಕ ಜೀವನದ ಪ್ರತಿಬಿಂಬ ಜೀವನದುದ್ದಕ್ಕೂ ಒಂದಿಲ್ಲೊಂದು ಪಾತ್ರ ಮಾಡಬೇಕಾಗುತ್ತದೆ ಅದೇ ತೆರೆಯ ಮೆಲೆ ಅಥವಾ ರಂಗಸಜ್ಜಿಕೆ ಮೇಲೆ ಅಭಿನಯಿಸಿದರೆ ಅದು ನಾಟಕ ಎನಿಸಿಕೊಳ್ಳುತ್ತದೆ ಎಂದರು 

ಕಾರ‌್ಯಕ್ರಮದಲ್ಲಿ ಶಿಕ್ಷಕರಾದ ಮದರಶ ಮಕಾಂದಾರ, ಸಂಗನಗೌಡ ಹಚಡದ, ಸಂತೋಷ ಬಿರಾದಾರ, ಆಚಿಜನೇಯ ಸ್ವಾಮಿ, ಅಣ್ಣಾರಾಯ ಗುಗದಡ್ಡಿ, ಮಲ್ಲಿನಾಥ ಬಿರಾದಾರ, ರಾಮಚಂದ್ರ ಬಿರಾದಾರ, ಅನಿತಾ ಅರಳಗುಂಡಗಿ, ರೇಖಾ ನಾಗಠಾಣ ಸೇರಿದಂತೆ ಅನೇಕರು ಇದ್ದರು. 

ವಿದ್ಯಾರ್ಥಿಗಳು ತಮ್ಮ ಕವನ ವಾಚನ, ಕಥಾ ವಾಚನ ಮಾಡಿ ತಾವು ಸಾಹಿತ್ಯದ ಬಗ್ಗೆ ಆಸಕ್ತಿ ತೊರಿಸಿದರು. 

ಸುದ್ದಿ ಓದಿ