ರಾಷ್ಟ್ರೀಯ

ಪುಟ್ಟ ಕಂದನಿಗೂ ಅಮರಿಕೊಂಡ ರೂಪಾಂತರ ಕೊರೋನ ಸೋಂಕು....

ಪುಟ್ಟ  ಕಂದನಿಗೂ ಅಮರಿಕೊಂಡ ರೂಪಾಂತರ ಕೊರೋನ ಸೋಂಕು....

ಲಕ್ನೋ, ಡಿಸೆಂಬರ್ 30 : ಬ್ರಿಟನ್ನಿನಲ್ಲಿ ಕಾಣಿಸಿಕೊಂಡ  ರೂಪಾಂತರ  ಹೊಸ ಕೊರೋನ  ಸೋಂಕು ಉತ್ತರ ಪ್ರದೇಶದಲ್ಲಿ ಎರಡು ವರ್ಷದ  ಮಗುವಿಗೂ ಅಮರಿಕೊಂಡಿದೆ.

ದೇಶದಲ್ಲಿ  ಕೊರೊನಾ ಸೋಂಕಿನ  ಎರಡನೇ ಅಲೆ ನಿಧಾನಗತಿಯಲ್ಲಿ ಆರಂಭವಾಗುತ್ತಿರುವ ಎಲ್ಲಾ ಹೊಸ ಬೆಳವಣಿಗೆ ಕಾಣಿಸಿಕೊಳ್ಳುತ್ತಿದೆ.

ದೇಶದಲ್ಲೂ ರೂಪಾಂತರಿ ಕೊರೋನಾ ಸೋಂಕಿನ  ಕಾಟ ಶುರುವಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಹೊಸ  ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದೀಗ ಉತ್ತರಪ್ರದೇಶದಲ್ಲಿ ಎರಡು ವರ್ಷದ ಮಗು ಹಾಗೂ ಪೋಷಕರಲ್ಲೂ ಸೋಂಕು ಪತ್ತೆಯಾಗಿರುವುದು  ಆತಂಕಕ್ಕೆ ಕಾರಣವಾಗಿದೆ.

ನಿನ್ನೆಯಷ್ಟೇ ರೂಪಾಂತರಿ ಕೊರೊನಾ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆ ಸೇರಿದಂತೆ  6 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು.

ಇದೇ  14 ರಂದು ಲಂಡನ್ ನಿಂದ ಮಗು ಹಾಗೂ ಮಗುವಿನ ತಾಯಿ, ತಂದೆ ಮೀರತ್'ಗೆ ಆಗಮಿಸಿದ್ದರು. ಮೂವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮೂವರಲ್ಲೂ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿರುವುದು ವೈದ್ಯಕೀಯ ವರದಿಗಳಿಂದ  ತಿಳಿದು ಬಂದಿದೆ ಎನ್ನಲಾಗಿದೆ.

 

ಸುದ್ದಿ ಓದಿ