ಇಂಡಿ

ಬಿಜೆಪಿ ಗೆಲುವು; ಅಧ್ಯಕ್ಷ-ಉಪಾಧ್ಯಕ್ಷ ಕಾರ್ಯಕರ್ತ ಸಂಭ್ರಮಾಚರಣೆ

ಬಿಜೆಪಿ ಗೆಲುವು; ಅಧ್ಯಕ್ಷ-ಉಪಾಧ್ಯಕ್ಷ ಕಾರ್ಯಕರ್ತ ಸಂಭ್ರಮಾಚರಣೆ

ಇಂಡಿ20: ಗುರುವಾರ ನಡೆದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪುರಸಭೆಯ ಗದ್ದುಗೆ ಹಿಡಿದಿದೆ. 

ಅಧ್ಯಕ್ಷರಾಗಿ ಬನ್ನೆಮ್ಮ ಯಲ್ಲಪ್ಪ ಹದರಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಅರಬ ಆಯ್ಕೆಯಾದರು. 

ಕಾಂಗ್ರೆಸ್ ಪಕ್ಷದಿಂದ ಭಾಗಿರಥಿ  ನಾಗಪ್ಪ ಕುಂಬಾರ ಮತ್ತು ಬಿಜೆಪಿಯಿಂದ ಬನ್ನೆಮ್ಮ ಯಲ್ಲಪ್ಪ ಹದರಿ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸಂಗೀತಾ ಸುಧಿರ ಕರಕಟ್ಟಿ ಮತ್ತು ಬಿಜೆಪಿಯಿಂದ ಇಸ್ಮಾಯಿಲ್ ಅರಬ ನಾಮಪತ್ರ ಸಲ್ಲಿಸಿದ್ದರು. 

ಇಂಡಿಯ ತಹಸೀಲ್ದಾರ ಚಿದಂಬರ ಕುಲಕರ್ಣಿ  ಇವರು ಚುನಾವಣೆ ಅಧಿಕಾರಿಯಾಗಿ ನೇಮಿಸಿದ್ದು  

23 ಸದಸ್ಯರ ಆಡಳಿತ ಹೊಂದಿರುವ ಇಂಡಿ ಪುರಸಭೆಗೆ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ 2ಎ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿತ್ತು.  

ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೇಸ್ ಪಕ್ಷದ ಶಾಸಕ ಯಶವಂತ್ರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೇಸ್ ಸದ್ಯರು ಪುರಸಭೆಗೆ ಮತದಾನ ಮಾಡಲು ಆಗಮಿಸಿ, ಕೊನೆ ಕ್ಷಣದಲ್ಲಿ ಚುನಾವಣೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆಯಿತು. 

ಕೋರಂ ಭರ್ತಿ ಆದ ನಂತರ ಚುನಾವಣಾಧಿಕಾರಿ, ತಹಸೀಲ್ದಾರ ಚಿದಂಬರ ಕುಲಕರ್ಣಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು. 

ವಿಜಯೋತ್ಸವ: ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 

ಬಿಜೆಪಿ ಪಕ್ಷದ ನೇತೃತ್ವ ವಹಿಸಿದ್ದ್‌ ಶಿವಯೋಗೆಪ್ಪ ನೇದಲಗಿ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ ಅವರನ್ನು ಕಾರ್ಯಕರ್ತರು ಎತ್ತಿಕೊಂಡು ಗುಲಾಲು ಎರಚಿ ಸಂಭ್ರಮಿಸಿದರು. 

ವಿಜಯೋತ್ಸವದಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ಶೀಲವಂತ ಉಮರಾಣಿ, ಸಂಜು ದಶವಂತ, ಅನೀಲಗೌಡ ಬಿರಾದಾರ, ರಮೇಶ ಧರೆನವರ, ಹಣಮಂತ್ರಾಯಗೌಡ ಪಾಟೀಲ, ಶಾಂತು ಕಂಬಾರ, ಯಲ್ಲಪ್ಪ ಹದರಿ, ಬಾಳು ಮುಳಜಿ, ರವಿ ವಗ್ಗೆ, ದಯಾನಂದ ಹುಬ್ಬಳ್ಳಿ, ಭೀಮಾಶಂಕರ ಆಳೂರ ಮತ್ತಿತರರು ಇದ್ದರು. 


ಸುದ್ದಿ ಓದಿ