ರವಿಕಾಂತ್ ಪಾಟೀಲ್ ಬಿಜೆಪಿ ಟಿಕೆಟ್ ನೀಡಲು ಆಗ್ರಹ.
ಇಂಡಿ: ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೂರು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ (ಹ್ಯಾಟ್ರಿಕ್ ಹೀರೋ) ರವಿಕಾಂತ್ ಪಾಟೀಲ್ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಬಂಜಾರ ಸಮಾಜದ ಮುಖಂಡ ನಿಂಗಪ್ಪ ಚೌಹಾಣ್ ಆಗ್ರಹಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರವಿಕಾಂತ್ ಪಾಟೀಲ್ ಅವರಿಗೆ ಅವರದ್ದೇ ಆದ ಬೆಂಬಲಿಗರ ಹಾಗೂ ಅಭಿಮಾನಿಗಳ ಪಡೆಯಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದು 32,000 ಮತಗಳನ್ನು ಪಡೆದು ತಮ್ಮ ಸಾಮಥ್ರ್ಯವನ್ನು ತೋರಿಸಿದ್ದಾರೆ. ಬಿಜೆಪಿ ಪಕ್ಷ ಅವರಿಗೆ ಟಿಕೆಟ್ ನೀಡಿದ್ದೇ ಆದರೆ ಖಂಡಿತ ಬಿಜೆಪಿ ಪಕ್ಷದ ಗೆಲುವು ಸಾಧ್ಯವಿದೆ. ಆ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆಂದು ವಿನಂತಿಸಿದರು.
ನಾನು ಲಂಬಾಣಿ ಸಮಾಜದಲ್ಲಿ ಜನಿಸಿದರೂ ನಮ್ಮನ್ನು ರವಿಕಾಂತ್ ಪಾಟೀಲ್ ಅವರು ತಮ್ಮ ಸಹೋದರರಂತೆ ಕಾಣುತ್ತಾರೆ ಕೇವಲ ಬಂಜಾರ ಸಮಾಜ ಅಷ್ಟೇ ಅಲ್ಲದೆ ಸರ್ವ ಸಮಾಜ ಬಾಂಧವರಿಗೂ ಸಹ ರವಿಕಾಂತ್ ಪಾಟೀಲ್ ಅವರು ಅತಿ ಹತ್ತಿರವಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಿದೆ. ಪಕ್ಷ ಗೆಲ್ಲಲೇ ಬೇಕಾದರೆ, ರವಿಕಾಂತ್ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ತಿಳಿಸಿದರು.
ರಮೇಶ್ ರಾಠೋಡ್, ಬಸವರಾಜ್ ಚೌಹಾಣ್, ಸಂದೀಪ್ ಚೌಹಾಣ್, ಮಾಣಿಕ್ ರಾಠೋಡ್ ಸೇರಿದಂತೆ ಮತ್ತಿತರರಿದ್ದರು.