ಜೆಡಿಎಸ್ನ ಪಂಚರತ್ನ ಯಾತ್ರೆ ನೋಡಿ ಬಿಜೆಪಿ ಹೆದರಿದೆ: ನಾಯಿಕ
ಕಾಗವಾಡ 19: ಬಿಜೆಪಿ ಪಕ್ಷದ ಶಾಸಕ ಸಿಟಿ ರವಿ ಹೇಳಿಕೆ ಖಂಡಿಸಿ ಇಂದು ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದಲ್ಲಿರುವ ಪ್ರವಾಸಿ ಮಂದಿರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಚಿಕ್ಕೋಡಿ ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ರಮೇಶ ನಾಯಿಕ ಅವರು ಎಚ್ ಡಿ ಕುಮಾರ್ ಸ್ವಾಮೀಯವರ ಪಂಚರತ್ನ ಯಾತ್ರೆಯನ್ನು ನೋಡಿ ಬಿಜೆಪಿ ಪಕ್ಷ ಹೆದರಿದೆ. ಅದಕ್ಕಾಗಿ ಬಿಜೆಪಿ ಪಕ್ಷದ ನಾಯಕರು ಜೆಡಿಎಸ್ ಪಕ್ಷದ ಕುರಿತು ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಅಂಗವಿಕಲರ ಪಕ್ಷವಲ್ಲ ಬಿಜೆಪಿ ಪಕ್ಷಕ್ಕೆ ಅಂಗವಿಕಲರ ಮೇಲೆ ಕಿಂಚ್ಚಿತ್ತೂ ಕಾಳಜಿ ಇಲ.್ಲ ಸಿಟಿ ರವಿ ಅವರ ಹೇಳಿಕೆಯು ಅಂಗವಿಕಲರಿಗೆ ಅವಮಾನ ಮಾಡಿದಂತಾಗಿದೆ. ದೈಹಿಕವಾಗಿ ಇರುವ ಅಂಗವಿಕಲರು ನಿಜವಾದ ಅಂಗವಿಕಲರಲ್ಲ. ನಿಮ್ಮಂತ ಕೊಳುಕು ಮನಸ್ಥಿತಿ ಉಳ್ಳವರು ನಿಜವಾದ ಅಂಗವಿಕಲರೂ ಎಂದು ಬಿಜೆಪಿ ಪಕ್ಷದ ಶಾಸಕ ಸಿಟಿ ರವಿ ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಿಟಿ ರವಿ ಅವರಿಗೆ ಕ್ಷೇಮ ಕೇಳುವಂತೆ ಒತ್ತಾಯಿಸಿದರು.
ಕಾಗವಾಡ ಬ್ಲಾಕ್ ಕಾರ್ಯದರ್ಶಿ ಮುರುಗೇಶ್ ಹುಡೆದಾರ್, ಕಾಗವಾಡ ಬ್ಲಾಕ್ ಎಸ್ಟಿ ಘಟದ ಅಧ್ಯಕ್ಷ ಕುಮಾರ ಮಾಕಣ್ಣವರ ಉಪಸ್ಥಿತರಿದ್ದರು.