ಶಿಗ್ಗಾವ್

ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಚಲ್ಲಾಟ ಆಡುತ್ತಾರೆ: ಶ್ರೀನಿವಾಸ ಮಾನೆ

ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಚಲ್ಲಾಟ ಆಡುತ್ತಾರೆ: ಶ್ರೀನಿವಾಸ ಮಾನೆ

ಶಿಗ್ಗಾವಿ 7: ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಚಲ್ಲಾಟ ಆಡುತ್ತಾರೆ, ಉಳುವವನೆ ಭೂಮಿಯ ಒಡೆಯ ಎಂದು ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರಕಾರ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಧಾರವಾಡ ಲೋಕಸಭಾ ಅಭ್ಯರ್ಥಿ ವಿನೊದ್ ಅಸೂಟಿಯವರ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಬರವಸೆಗಳನ್ನ ಕೊಟ್ಟು ಜನರ, ಬಡವರ ದಾರು ತಪ್ಪಿಸುವ ಕಾರ್ಯ ಮಾಡುತ್ತಾರೆ, ನಮ್ಮ ಅಭ್ಯರ್ಥಿ ವಿನೋದ್ ಅಸೂಟಿಯನ್ನ ಇಲ್ಲಿ ಗೆಲ್ಲಿಸೋಣ ನಮ್ಮ ಕಾಂಗ್ರೆಸ್ ಸರಕಾರದ ಮಹಾಲಕ್ಷ್ಮಿಯನ್ನು ಸ್ವಾಗತ ಮಾಡಿ, ಭ್ರಷ್ಟಾಚಾರ ಮಾಡಿದವರು ಬಿಜೆಪಿ ಪಕ್ಷಕ್ಕೆ ಸೇರಿದರೆ ನಿರ್ದೂಷಿಯಾಗುತ್ತಾರಂತೆ ಹೀಗಾಗಿ ಭ್ರಷ್ಟಚಾರ ಮಾಡುವವರ ಪಕ್ಷವಾಗಿದೆ ಎಂದರು. 

ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ವಿನೋದ್ ಅಸೂಟಿ ಮಾತನಾಡಿ, ಬಿಜೆಪಿ ಸುಳ್ಳು ಹೇಳುತ್ತಲೇ ಅಧಿಕಾರ ಅನುಭವಿಸುತ್ತಿದೆ, ಜನ್ ಧನ್ ಖಾತೆಗಳನ್ನ ತೆರೆಸಿ 15 ಲಕ್ಷಗಳನ್ನ ಹಾಕುತ್ತೆವೆ ಎಂದು ಹೇಳಿ ಜನರಿಗೆ ಅನ್ಯಾಯ ಮಾಡಿದೆ, ಬಸವಣ್ಣನವರ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಹಾದಿಯಲ್ಲಿ ನಮ್ಮ ಕಾಂಗ್ರೇಸ್ ಪಕ್ಷ ನಡೆಯುತ್ತಿದೆ ಆದ್ದರಿಂದ ಈ ಭಾರಿ ಮತ ನೀಡುವಂತೆ ಮನವಿ ಮಾಡಿದರು. 

ಯಾಸೀರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಬಿಜೆಪಿಯ ಹೈಟೆಕ್ ಲೀಡರ್ ಗಳಿದ್ದಾರೆ, ತಾಲೂಕಿನ 37 ಗ್ರಾಮ ಪಂಚಾಯತಿಯಲ್ಲಿ 23 ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದೆ, ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹೆಚ್ಚು ನಿಗಮಗಳ ನಿರ್ದೇಶಕರನ್ನ ನಮ್ಮ ಕ್ಷೇತ್ರ ಪಡೆದಿದೆ, ನಮ್ಮ ಕ್ಷೇತ್ರದವರೇ ಸಿಎಂ ಹಾಗೂ ಕೇಂದ್ರ ಸಚಿವರಿದ್ದರು ಆದರೆ ಅದಿಕಾರ ಪಡೆದರೂ ಅಭಿವೃದ್ದಿ ಮಾತ್ರ ಶೂನ್ಯವಾಗಿದೆ ಎಂದರು. 

ಶಿಗ್ಗಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ ಸಿ ಪಾಟೀಲ, ಎಸ್ ವಿ ಪಾಟೀಲ, ಶಿವಾನಂದ ರಾಮಗೇರಿ, ಪ್ರೇಮಾ ಪಾಟೀಲ, ಯೂಸಬ್ ಸಾಭ್ ಭಾವಿಕಟ್ಟಿ, ಮಹೇಶ ತಳವಾರ, ಸುಧೀರ ಲಮಾಣಿ, ರಮೇಶ ದುಗ್ಗತ್ತಿ, ಗುಡ್ಡಪ್ಪ ಜಲದಿ, ಮಂಜುನಾಥ ಮಣ್ಣಣ್ಣವರ, ಎಸ್‌.ಎಫ್,ಮಣಕಟ್ಟಿ, ಬಾಬರ ಬಾವಜೀ ಸೇರಿದಂತೆ ಕಾಂಗ್ರೇಸ್ ಮುಖಂಡರು ಹಾಗೂ ಕೋಣನಕೇರಿ, ಅಂದಲಗಿ ಪಂಚಾಯತಿ ವ್ಯಾಪ್ತಿಯ ಮುಖಂಡರು ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ