ರಾಣೆಬೆನ್ನೂರ

ಬಿಜೆಪಿ ಸರ್ಕಾರದ ಸಾಧನೆ ಜನಸಾಮಾನ್ಯರಿಗೆ ತಿಳಿಸಬೇಕು : ಲಿಂಗರಾಜ ಪಾಟೀಲ

ಬಿಜೆಪಿ ಸರ್ಕಾರದ ಸಾಧನೆ ಜನಸಾಮಾನ್ಯರಿಗೆ ತಿಳಿಸಬೇಕು : ಲಿಂಗರಾಜ ಪಾಟೀಲ

ರಾಣೆಬೆನ್ನೂರು 09:  ರಾಜ್ಯ  ಸರ್ಕಾರದ ಆಡಳಿತ ವೈಖರಿ ರಾಜ್ಯದ ಜನತೆ ಮುಕ್ತಕಂಠದಿಂದ ಸ್ಲಾಗಿಸುತ್ತಿದ್ದಾರೆ  ಅಂತಹ ಮಹತ್ವದ ಮತ್ತು  ಐತಿಹಾಸಿಕ ದಾಖಲಿಸುವ ಕಾರ್ಯವು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ​ಪ್ಪ  ಮತ್ತು ಹಾಲಿ  ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಎಂದು ಬಿಜೆಪಿ ಶಿಸ್ತು  ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ್ ಪಾಟೀಲ್ ಹೇಳಿದರು. ಅವರು ರವಿವಾರ ಸಂಜೆ , ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೀಸಲಾತಿ ಬೇಡಿಕೆ  ಬಹುವರ್ಷಗಳ ಕನಸಾಗಿತ್ತು, ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಕನಸು ನನಸು ಮಾಡಿದೆ, ಇದರಿಂದ ಐತಿಹಾಸಿಕ ನಿರ್ಧಾರ ಪ್ರಕಟಿಸಿ ದಂತಾಗಿದೆ ಎಂದ ಅವರು, ರಾಜ್ಯದ ಜನತೆ ನಿರ್ಧಾರ ಹೊರಬೀಳುತ್ತಿದ್ದಂತೆ ಸಂತೃಪ್ತ ಗೊಂಡಿದ್ದಾರೆ, ಆಯಾ ಸಂದರ್ಭದಲ್ಲಿ, ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ಸರ್ಕಾರ ಜನರ ಬೇಡಿಕೆ ಈಡೇರಿಸಿದೆ ಪ.ಜಾ., ಪ. ಪಂ. ಸಮುದಾಯಕ್ಕೆ ನ್ಯಾಯಸಮ್ಮತ ಹಕ್ಕು ದಕ್ಕಿದೆ ಎಂದರು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ತಮ್ಮ ಅವಧಿಯ  ಎಂಟು ವರ್ಷಗಳ ಸಾಧನೆ ಜನಸಮುದಾಯಕ್ಕೆ ತಿಳಿಯಬೇಕಾಗಿದೆ.ಈ ನಿಟ್ಟಿನಲ್ಲಿ  ರಾಜ್ಯದಲ್ಲಿ ಮೂರು ತಂಡವಾಗಿ ಮಾಡಿ ಒಟ್ಟು 140 ಕ್ಷೇತ್ರಗಳಲ್ಲಿ ಮೊದಲ ಹಂತವಾಗಿ ಸಂಚರಿಸಲಿದ್ದೇವೆ. ಗುಲ್ಬರ್ಗದಿಂದ ಅರುಣ್ ಸಿಂಗ್ ಅವರ ನೇತೃತ್ವದಲ್ಲಿ  ಆರಂಭಿಸಿರುವ ಪ್ರವಾಸದಲ್ಲಿ (ರಾಜಕೀಯ ಸಮಾಲೋಚನೆ ಚುನಾವಣಾ ಪ್ರಕ್ರಿಯೆ ಸಿದ್ಧತೆ) ಕುರಿತು ಚರ್ಚೆ ನಡೆಯಲಿದೆ. ಅವರೊಂದಿಗೆ ಶಾಸಕರು ಸಂಸದರು ಸ್ಥಳೀಯ ಕಾರ್ಯಕರ್ತರು ಪಾಲ್ಗೊಳ್ಳುವರು.ಶಿವಮೊಗ್ಗದಲ್ಲಿ ಬ್ರಹತ್ ಯುವ ಸಮುದಾಯ ಸಮಾವೇಶ ಆಯೋಜಿಸಿದ್ದೇವೆ. ರಾಯಚೂರಿನಿಂದ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರ​‍್ಪ ಪ್ರವಾಸ ಆರಂಭಿಸುವರು. ಹಾವೇರಿ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಮಹೇಶ್ ತೆಂಗಿನಕಾಯಿ, ಸ್ಥಳೀಯ ಶಾಸಕರು ಸಂಸದರು, ಹತ್ತಾರು ಸಾವಿರ ಕಾರ್ಯಕರ್ತರೊಂದಿಗೆ ಬೃಹತ್ ಸಮಾವೇಶ ನಡೆಯಲಿದೆ ,ಎಂದು ವಿವರಿಸಿದರು. ಅಕ್ಟೋಬರ್ 11ರಂದು  ಮಂಗಳವಾರ 2:00 ಗಂಟೆಗೆ ವಾಣಿಜ್ಯ ನಗರಕ್ಕೆ ಆಗಮಿಸುವ, ನಳಿನ್ ಕುಮಾರ್ ಕಟೀಲ್ ಅವರ ತಂಡವು ಸಿದ್ದೇಶ್ವರ ದೇವಸ್ಥಾನದಿಂದ ಹೊರಟು, ನಂತರ ಹುತಾತ್ಮ ಮೆಣಸಿನಹಾಳ ತಿಮ್ಮನಗೌಡ್ರ ಅವರ. ಸಮಾಧಿ ಸ್ಥಳಕ್ಕೆ ಧಾವಿಸಿ ಮಾಲಾರ್ಪಣೆ ಸಲ್ಲಿಸುವರು. ಎಸ್ಸಿ ಎಸ್ಟಿ ಸಮುದಾಯದ ಫಲಾನುಭವಿಗಳ  ಸಮಾವೇಶದಲ್ಲಿ ಪಾಲ್ಗೊಂಡು ಅಲ್ಲಿ ಸಹಭೋಜನ ಮಾಡುವರು.ನಂತರ ಮೃತ್ಯುಂಜಯ ಸಭಾಭವನದಲ್ಲಿ ಸಭೆ ನಡೆಸಿ, ಸಂಜೆ ಬಿಜೆಪಿ ಕಾರ್ಯಾಲಯ ಆವರಣದಲ್ಲಿ  ಬೃಹತ್ ಸಮಾವೇಶ ನಡೆಯಲಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ  ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಭಾರಿ ಕಲ್ಲೇಶ್, ಶಾಸಕ ಅರುಣ್ ಕುಮಾರ್ ಪೂಜಾರ, ನಗರ ಅಧ್ಯಕ್ಷ, ದೀಪಕ್ ಹರಪನಹಳ್ಳಿ, ಗ್ರಾಮೀಣ  ಅಧ್ಯಕ್ಷ  ಬಸವರಾಜ ಕೇಲಗಾರ, ಮುಖಂಡರಾದ ಕೆ.ಶಿವಲಿಂಗಪ್ಪ, ಡಾ: ಬಸವರಾಜ ಕೇಲಗಾರ, ಚೋಳಪ್ಪ ಕಸವಾಳ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ