ರೈತಪರ ಕಾಳಜಿ ವಹಿಸದ ಬಿಜೆಪಿ ಸರ್ಕಾರ
ರಾಣಿಬೆನ್ನೂರ 06: ಕೇಂದ್ರದಲ್ಲಿರುವ ಮೋದಿ ಸರ್ಕಾರ ರೈತರ, ನಾಗರಿಕರ ಹೆಸರಿನಲ್ಲಿ ಅನೇಕ ಆಸೆ ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಗತಿಸಿದವು, ರೈತರ ಕಾಳಜಿ ವಹಿಸದೆ ರೈತ ವಿರೋಧಿ ಕಾನೂನು ಜಾರಿಗೆ ತಂದು ರೈತರ ಬದುಕು ಮುಗಿಸಲು ಹೊರಟಿದೆ ಅದಕ್ಕಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು, ರೈತ ಪರ ಸಂಘಟನೆಗಳು ನಿರ್ಧರಿಸಿರುವುದಾಗಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ್ ಹೇಳಿದರು.
ರವಿವಾರ ನಗರದ ಅಕ್ಷಯ್ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಜಿಯವರು ಅಧಿಕಾರಕ್ಕೆ ಬರುವ ಮುನ್ನ ರೈತರಿಗೆ ನೀಡಿರುವ ಅಭಿವೃದ್ಧಿಪರ ಯಾವುದೇ ಭರವಸೆಗಳು ಈಡೇರಿಲ್ಲ, ಬದಲಾಗಿ ರೈತ ವಿರೋಧಿ 3 ಕಾನೂನುಗಳನ್ನು ಜಾರಿಗೆ ತಂದು, ರೈತರು ಕೃಷಿ ವಿಮುಖರಾಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟಗಳು ಒಂದಾಗಿ ಚುನಾವಣೆಯ ಎದುರಿಸಲು ಮುಂದಾಗಿದ್ದು, ರೈತರಿಗೆ ಸಂಪೂರ್ಣ ಸಾಲ ಮನ್ನಾ ಸೇರಿ ಮತ್ತಿತರ ಗ್ಯಾರೆಂಟಿ ಯೋಜನೆಗಳು ಜಾರಿಗೆ ತರಲು ಮುಂದಾಗಿದ್ದಾರೆ ಅದಕ್ಕಾಗಿ ಎಲ್ಲ ರೈತ ಸಂಘಟನೆಗಳು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಚನ್ನಪ್ಪ ಅಡಿವೇರ, ನಿಂಗಪ್ಪ ಸತ್ಯಪ್ಪನವರ್, ಹನುಮಂತಪ್ಪ ಅಡಿವೇರ, ಜಟ್ಟಪ್ಪ ಕನ್ನಪ್ಳವರ್, ಹನುಮಂತಪ್ಪ ಪರಸಣ್ಣನವರ್, ಕರಬಸಪ್ಪ ಕಡೆನಾಯಕನಹಳ್ಳಿ, ಬಸಪ್ಪ ಹಾದಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.