ಇಂಡಿ

ನ. 8ರಂದು ಬಿಜೆಪಿ ಸಮಾವೇಶ: ಉಸ್ತುವಾರಿ ಅರುಣಸಿಂಗ ಆಗಮನ

ನ. 8ರಂದು ಬಿಜೆಪಿ ಸಮಾವೇಶ:  ಉಸ್ತುವಾರಿ ಅರುಣಸಿಂಗ ಆಗಮನ
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಕವಟಗಿ ಮಾತನಾಡಿದರು.

ಇಂಡಿ: ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ‌್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿ ಅರುಣಸಿಂಗ ನವೆಂಬರ್ 8 ರಂದು ಇಂಡಿಗೆ ಆಗಮಿಸಲಿದ್ದಾರೆ ಎಂದು ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ ಬಿಜೆಪಿ ಬೆಳಗಾವಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ ಹೇಳಿದರು. 

ಶನಿವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಅವರು ಮಾತನಾಡಿದರು. 

ನವೆಂಬರ್ 8ರಂದು ಬೆಳಗ್ಗೆ 11 ಘಂಟೆಗೆ ಪಟ್ಟಣದ ವಿಜಯಪುರ ರಸ್ತೆಯ ಧನಶೆಟ್ಟಿ ಶುಭಂ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು. ಇಂಡಿ ಮತಕ್ಷೇತ್ರದಲ್ಲಿ ಪಕ್ಷದ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆಯ ಮತ್ತು ತಾಲೂಕಿನ ನಾಯಕರು ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ವಾತಾವರಣ ನಿರ್ಮಾಣ ಮಾಡುವದು, ಸರಕಾರ ಕೈ ಕೊಂಡ ಕಾರ‌್ಯಗಳನ್ನು ಕಾರ‌್ಯಕರ್ತರು ಮನೆ ಮನೆ ತಲುಪಿಸುವದು, 2023 ರ ಚುನಾವಣೆಗೆ ಪಕ್ಷದ ಗೆಲುವಿಗೆ ಶ್ರಮಿಸುವ ಕುರಿತು ಚಿಂತನೆ ನಡೆಸಲಾಗುವದೆಂದರು.  

ಅದಕ್ಕಾಗಿ ಬಿಜೆಪಿ ಸಮಾವೇಶಕ್ಕೆ ವೇದಿಕೆ ಸಜ್ಜಾಗುತ್ತಿದ್ದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಎಲ್ಲರ ಚಿತ್ತ ಮುಂದಿನ ಚುನಾವಣೆಯತ್ತ ಇರುವದರಿಂದ ಪ್ರತಿ ಬೂತಗಳಿಂದ ಕಾರ‌್ಯಕರ್ತರ ಪಡೆ ಬರಲಿದೆ ಎಂದರು.  

ರಾಹುಲ್ ಗಾಂಧಿ ಮಾಡುತ್ತಿರುವ ಭಾರತ ಜೋಡೋ ಯಾತ್ರೆ ಭಾರತ ಚೋಡೋ ಯಾತ್ರೆಯಾಗುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಬಿಜೆಪಿ ಪಕ್ಷದ ಬಿರುಗಾಳಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತಿದೆ ಎಂದರು. 

ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಕಾಸುಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಶಿವರುದ್ರ ಬಾಗಲಕೋಟ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ‌್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಅನೀಲ ಜಮಾದಾರ, ಶ್ರೀಶೈಲಗೌಡ ಬಿರಾದಾರ, ಮುತ್ತು ದೇಸಾಯಿ, ಹಣಮಂತರಾಯಗೌಡ ಬಿರಾದಾರ, ಬುದುಗೌಡ ಪಾಟೀಲ, ದೇವಿಂದ್ರ ಕುಂಬಾರ, ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ