ಕಾಗವಾಡ

ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ನಾಮಪತ್ರ ಸಲ್ಲಿಕೆ

ಕಾಗವಾಡ 19: ಇಂದು ಕಾಗವಾಡ ತಾಲೂಕಾ ಪಟ್ಟಣದಲ್ಲಿರುವ ಚುನಾವಣಾ ಅಧಿಕಾರಿಯ ಕಚೇರಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರು ಬೃಹತ್ ಬೈಕ್ ರಾ​‍್ಯಲಿ ಮಾಡುವ ಮೂಲಕ ನಾಮಪತ್ರವನ್ನು ಸಲ್ಲಿಕೆ ಮಾಡಿದರು.  

ನಂತರ ಶಾಂತಿಸಾಗರ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇವತ್ತಿನ ನನಗೆ ತುಂಬಾ ಖುಷಿ ತಂದ ದಿನವಾಗಿದ್ದು ನನ್ನ ಮತಕ್ಷೇತ್ರದಲ್ಲಿ ಈಗಾಗಲೇ 70 ರಷ್ಟು ಕೆಲಸ ಮಾಡಿದ್ದೇನೆ ಮುಂದಿನ ಸಲ ನೀವು ನನಗೆ ಮತ್ತೋಮ್ಮೆ ಆಶೀರ್ವಾದ ಮಾಡಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು. 

ನಂತರ ರಮೇಶ್ ಜಾರಕಿಹೊಳಿ ಅವರು ಮಾತನಾಡಿ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡಿ. ಕೆಲವೊಂದಿಷ್ಟು ಜನ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಆದ ಕಾರಣ ನಾನು ಮೇ 13ರಂದು ಮಾತನಾಡುತ್ತೇನೆ ಎಂದು ಹೇಳಿದರು.  

ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ,  ಅಭಯ ಅಕ್ಕಿವಾಟೆ, ಶೀತಲ್ ಪಾಟೀಲ, ತಮ್ಮಣ್ಣಾ ಪಾರಶೆಟ್ಟಿ ರಾಕೇಶ ಪಾಟೀಲ, ಅಪ್ಪಾಸಾಬ ಅವತಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ