ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ಶಾಸಕ ಶ್ರೀಮಂತ
ಶೇಡಬಾಳ 13: ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತವೆಂದು ಮಾಜಿ ಸಚಿವ ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲರು ಹೇಳಿದರು.
ಅವರು ಸೋಮವಾರ ದಿ. 13 ರಂದು ಕಾಗವಾಡ ಪಟ್ಟಣದ ಸರ್ಕಾರಿ ಕನ್ನಡ ಶಾಲೆಯ ಚುನಾವಣೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜನಪರ ಯೋಜನೆಗಳಿಂದ ಬಿಜೆಪಿ ಪಕ್ಷದ ಪದವೀಧರ ಅಭ್ಯರ್ಥಿಯಾದ ಹಣಮಂತ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಅರುಣ ಶಹಾಪೂರ ಪ್ರಥಮ ಪ್ರಾಶಸ್ತ್ಯ ಮತಗಳನ್ನು
ಪಡೆದು ಜಯಶಾಲಿಯಾಗಲಿದ್ದಾರೆಂದು ಹೇಳಿದರು.
ಸುಶಿಕ್ಷಿತ ಮತದಾರರು ಪ್ರಭುದ್ಧರಾಗಿದ್ದು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಂದು ಹೇಳಿದರು.
ಮುಂಜಾನೆ 10.30 ಗಂಟೆಗೆ ಮತದಾನ ಕೇಂದ್ರಕ್ಕೆ ತಮ್ಮ ಪುತ್ರರೊಂದಿಗೆ ಆಗಮಿಸಿದ ಶಾಸಕ ಶ್ರೀಮಂತ ಪಾಟೀಲರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಈ ಸಮಯದಲ್ಲಿ ಶ್ರೀಮಂತ ಪಾಟೀಲರ ಪುತ್ರರಾದ ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ತಾತ್ಯಾಂಭಟ್ ಜೋಷಿ, ಸುಭಾಷ ಮೋನೆ, ಪ್ರಕಾಶ ಚೌಗಲೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.