ಇಂಡಿ

ಗುಂಡಾಗಿರಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಗುಂಡಾಗಿರಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ರಾಮನಗರ ಕಾರ್ಯಕ್ರಮದಲ್ಲಿ ನಡೆದ ಗುಂಡಾಗಿರಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಂಡಿ04:  ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ. ಅಂಬೇಡ್ಕರ ಮತ್ತು ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಎದುರೆ ನಡೆದ ಗುಂಡಾಗಿರಿ ಖಂಡಿಸಿ ಹಾಗೂ ಸಚಿವ ಅಶ್ವಥ ನಾರಾಯಣ ಭಾಷಣ ಮಾಡುವಾಗ ಅಡ್ಡಿ ಪಡಿಸಿರುವದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತಲುಪಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.  

ಭಾಜಪ ಯುವಮೋರ್ಚಾ ಅಧ್ಯಕ್ಷ ಅನೀಲಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಕಾಸುಗೌಡ ಬಿರಾದಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಅನೀಲ ಜಮಾದಾರ,  ರವಿ ವಗ್ಗಿ, ಯಲ್ಲಪ್ಪ ಹದರಿ, ದೇವೇಂದ್ರ ಕುಂಬಾರ, ವಿಜು ಮೂರಮನ, ಸೈಪನ ಪವಾರ, ದತ್ತಾ ಬಂಡೆನವರ, ರಮೇಶ ಧರೆಣ್ಣನವರ, ಮಲ್ಲು ವಾಲಿಕಾರ, ಪ್ರಸಾದ ಮಠ, ಪ್ರವೀಣ ಮಠ, ಪಿಂಟು ರಾಠೋಡ, ಸಿದ್ದಲಿಂಗ ಹಂಜಗಿ ಮತ್ತಿತರಿದ್ದರು. 

ಸುದ್ದಿ ಓದಿ