ಸಿಂಧಗಿ

ಗೆಲುವಿಗೂ ಮುನ್ನವೇ ಕಮಲ ಕಾರ್ಯಕರ್ತರ ಜಯಘೋಷ

ಗೆಲುವಿಗೂ ಮುನ್ನವೇ ಕಮಲ ಕಾರ್ಯಕರ್ತರ ಜಯಘೋಷ

ಸಿಂಧಗಿ/ಬೆಂಗಳೂರು,ನ.2: ಗೆಲುವಿಗೂ ಮುನ್ನವೇ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಜಯಘೋಷ ಹಾಕಿರುವ ದೃಶ್ಯ ಸಿಂಧಗಿಯಲ್ಲಿ ಎದ್ದುಕಂಡಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿರುವ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣಾ ಕ್ಷೇತ್ರಗಳ ಫಲಿತಾಂಶಕ್ಕೆ ಮಧ್ಯಾಹ್ನ‌ 1ರಷ್ಟೊತ್ತಿಗೆ ಸ್ಪಷ್ಟ ಚಿತ್ರಣವೊಂದು ಸಿಗಲಿದೆ.

ಮೂರು ಪಕ್ಷಗಳ ನಾಯಕರೂ ಸಹ ಗೆಲ್ಲುವ ವಿಶ್ವಾಸ ತೋರುತ್ತಿದ್ದರೂ  ಮತದಾರ ಯಾರ ಕೈ ಹಿಡಿದಿದ್ದಾನೆ ಎಂಬ ಕುತೂಹಲವಿದೆ.

ಮೂರು ಸುತ್ತುಗಳಲ್ಲಿ ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಮುನ್ನಡೆ ಸಾಧಿಸಿರುವ ಹಿನ್ನಲೆಯಲ್ಲಿ ಮತ ಎಣಿಕೆ ಕೇಂದ್ರದತ್ತ ಕಮಲ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು  ಜಮಾವಣೆಗೊಂಡು ರಮೇಶ್ ಭೂಸನೂರು ಮುನ್ನಡೆಗೆ ಸಂಭ್ರಮಿಸಿ ಜಯಕಾರ ಕೂಗಿದರು.

ಸುದ್ದಿ ಓದಿ