ರಾಹುತನಕಟ್ಟಿ ಗ್ರಾಮದ ಹೊಲಕ್ಕೆ ಬಿಜೆಪಿ ಬರ ಅಧ್ಯಯನ ತಂಡ ಬೇಟೆ: ಪರೀಶೀಲನೆ
ರಾಣೇಬೆನ್ನೂರು31:ಕಾಂಗ್ರೆಸ್ ಆಡಳಿತದ ಸರ್ಕಾರ, ಕಣ್ಣು,ಬಾಯಿ, ಮತ್ತು ಮಾನವೀಯತೆ ಮರೆತು, ರಾಜ್ಯದ ರೈತ ವಿರೋಧಿ ಧೋರಣೆ ಅನುಸರಿಸುತ್ತಾ, ಭ್ರಷ್ಟಾಚಾರದಲ್ಲಿ ತೊಡೆದುಕೊಂಡು ಗ್ಯಾರೆಂಟಿಗಳಲ್ಲಿ ಮುಳುಗಿ ಹೋಗಿದೆ ಎಂದು ಬಿಜೆಪಿಯ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಬಲವಾಗಿ ಆರೋಪಿಸಿದರು.
ಅವರು ಸೋಮವಾರ ನಗರಕ್ಕಾಗಮಿಸಿದ ಭಾರತೀಯ ಜನತಾ ಪಕ್ಷದ ಬರ ಅಧ್ಯಯನ ತಂಡದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಭಾರತೀಯ ಜನತಾ ಪಕ್ಷವು ಖಂಡಿಸುತ್ತದೆ. ಬಿಜೆಪಿ ಸರ್ಕಾರವು ಅಂತಹ ಸಂಕಷ್ಟ ಕಾಲದಲ್ಲಿ ಸಹ ಬಿಟ್ಟುಕೊಡದೆ ಎಲ್ಲ ರೀತಿಯಲ್ಲಿ ಸಹಾಯ ಮಾಡಿದೆ. ರೈತ ಉಳಿದರೆ ನಾವು ಉಳಿಯುತ್ತದೇ,ನಾಡು ಉಳಿಯುತ್ತೆ ನಾಡಿನ ಜನರು ಉಳಿಯುತ್ತಾರೆ. ಇಲ್ಲದೆ ಹೋದರೆ ಆಹಾರ ಭದ್ರತೆಯಿಂದ ನಿಯಂತ್ರಣ ಕರೆದುಕೊಂಡು, ಮತ್ತಷ್ಟು ಭೀಕರತೆ ಅನುಭವಿಸಬೇಕಾಗುತ್ತದೆ ಎಂದು ಪಾಟೀಲ್ ಅವರು ವಿಷಾದಿಸಿದರು.
ಬರಗಾಲದಿಂದ ಮುಂಗಾರು ಕಾಣದೆ ರೈತ ಸಮುದಾಯ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಸರ್ಕಾರವಾಗಲಿ, ಸಂಬಂಧಿಸಿದ ಸಚಿವರಾಗಲಿ, ಆಯಾ ತಾಲೂಕಿನ ಇಲಾಖೆ ಅಧಿಕಾರಿಗಳಾಗಲಿ, ರೈತರನ್ನು ಮಾತನಾಡಿಸಿಲ್ಲ, ಪರಿಸ್ಥಿತಿಯನ್ನು ವಿವರಿಸಿಲ್ಲ ಹೀಗಾದರೆ ಬಿಜೆಪಿ ಸುಮ್ಮನೆ ಕೂಡುವುದು ಸಾಧ್ಯವಿಲ್ಲ, ಕೂಡಲೇ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ್ ಸರಕಾರದ ವಿರುದ್ಧ ಕಿಡಿಕಾರಿದರು. ರಾಹುತನ ಕಟ್ಟಿ ಗ್ರಾಮದ ಜಮೀನು ಮಾಲೀಕ ಚಿಕ್ಕಪ್ಪ ಕಂಬಳಿ ಅವರ ಗೋವಿನ ಜೋಳದ ಹೊಲಕ್ಕೆ ಭೇಟಿ ನೀಡಿದ ಬರ ಆದ್ಯಯನ ಪರೀಶೀಲನಾ ತಂಡದ ಮುಂಚೂಣಿಯಲ್ಲಿ, ಬಿಜೆಪಿ ಮಾಜಿ ಸಚಿವ ಕಳಕಪ್ಪ ಬಂಡಿ, ಜಿಲ್ಲಾ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರ ಅರುಣಕುಮಾರ ಪೂಜಾರ್, ವಿರುಪಾಕ್ಷಪ್ಪ ಬಳ್ಳಾರಿ, ಶಾಸಕ ಚಂದ್ರು ಲಮಾಣಿ, ಮುಖಂಡ ಶಿವರಾಜ ಸಜ್ಜನರ, ಕೆ. ಶಿವಲಿಂಗಪ್ಪ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ್, ಡಾ: ಬಸವರಾಜ ಕೇಲಗಾರ, ಮಹಿಳಾ ಮುಖಂಡ ಭಾರತಿ ಜಂಬಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಮಂಡಲದ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಸಿದ್ದಣ್ಣ ಚಿಕ್ಕಬಿದರಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪವನಕುಮಾರ್ ಮಲ್ನಾಡದ, ಬಸವರಾಜ ಹುಲ್ಲತ್ತಿ ಸೇರಿದಂತೆ ಪಕ್ಷದ ಮತ್ತಿತರ ಗಣ್ಯರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.