ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಸದಸ್ಯತಾ ಅಭಿಯಾನ
ಧಾರವಾಡ 27: ಭಾರತೀಯ ಜನತಾ ಪಾರ್ಟಿ ಧಾರವಾಡ ಗ್ರಾಮಾಂತರ ಜಿಲ್ಲೆಯ ಸದಸ್ಯತಾ ಅಭಿಯಾನ 2024ರ ಜಿಲ್ಲಾ ಕಾರ್ಯಾಗಾರದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ ನೆರವೇರಿಸಿದರು.
ಪ್ರಪಂಚದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ಸದಸ್ಯರಾಗುವ ಪ್ರಕ್ರಿಯೆ ಹಾಗೂ ಪಕ್ಷ ಸಂಘಟನೆಯಲ್ಲಿ ಈ ಅಭಿಯಾನದ ಮಹತ್ವದ ಕುರಿತು ತಿಳಿಸಲಾಯಿತು, ಮಾನ್ಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯುರ್ಪ ಅವರು ದಿನಾಂಕ 25 ಆಗಸ್ಟ 2024 ರಂದು ಬೆಂಗಳುರಿನ ಅರಮನೆ ಮೈದಾನದಲ್ಲಿ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿದ್ದಾರೆ. ಬೂತ ಮಟ್ಟದಿಂದಲೂ ಪ್ರತಿ ಮನೆ ಮನೆಗಳನ್ನು ತಲುಪಿ ವಿಶ್ವ ಭೂಪಟದಲ್ಲಿ ನಂ1 ರಾಜಕೀಯ ಪಕ್ಷವಾಗಿರುವ ಬಿಜೆಪಿ ಸದಸ್ಯತ್ವವನ್ನು ಅತ್ಯಂತ ಪರಿನಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ನೆರವೆರಿಸಲು ಪಕ್ಷದ ಎಲ್ಲರು ಶ್ರಮಿಸಬೆಕೇಂದು ಅನಿಲ ಬೆನಕೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಶಾಸಕರಾದ ಮಹೇಶ ತೆಂಗಿನಕಾಯಿ, ಎಮ್.ಆರ್.ಪಾಟೀಲ, ವಿಧಾನ ಪರಿಷತ ಸದಸ್ಯರಾದ ಪ್ರದೀಪ ಶೆಟ್ಟರ, ಮಾಜಿ ಶಾಸಕರಾದ ಅಮೃತ ದೇಸಾಯಿ, ಮಾಜಿ ವಿಧಾನಪರಿಷತ ಸದಸ್ಯರಾದ ನಾಗರಾಜ ಛಬ್ಬಿ, ಪ್ರಮುಖರಾದ ಬಸವರಾಜ ಕುಂದಗೋಳಮಠ, ಶಶಿಮೌಳಿ ಕುಲಕರ್ಣಿ, ಮಾಲತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ ಹಾಗೂ ಬಿಜೆಪಿ ಧಾರವಾಡ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.