ಬೈಲಹೊಂಗಲ

ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಸಂಭ್ರಮಾಚರಣೆ

ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಸಂಭ್ರಮಾಚರಣೆ

ಲೋಕದರ್ಶನ ವರದಿ 


ಬೈಲಹೊಂಗಲ 08: ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. 

     ಪಟ್ಟಣದ ವಿದ್ಯಾನಗರದ ಡಾ.ವಿಶ್ವನಾಥ ಪಾಟೀಲ ಗೃಹ ಕಛೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿದಿ ಸಿಹಿ ಹಂಚಿ ಸಂಭ್ರಮಿಸಿದರು. 

   ಡಾ.ವಿಶ್ವನಾಥ ಪಾಟೀಲ ಮಾತನಾಡಿ,  ಗುಜರಾತ ಚುನಾವಣೆಯು  ಕರ್ನಾಟಕದ ಚುನಾವಣೆಗೆ ಮಾದರಿ ಆಗಲಿದೆ. ಗುಜರಾತಿನಲ್ಲಿ ಗೆಲುವು ಆದಂತೆ ಕರ್ನಾಟಕದಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಲಿದೆ. 150 ಕ್ಕೂ ಹೆಚ್ಚು ಸ್ಥಾನಗಳು ಗುಜರಾತಿನಲ್ಲಿ ಬಂದಿದ್ದು  ಇದೊಂದು  ಐತಿಹಾಸಿಕ ಗೆಲುವಾಗಿದೆ ಎಂದರು. 

   ಈ ಸಂದರ್ಭದಲ್ಲಿ ಸುಧೀರ ವಾಲಿ, ಮುರಗೇಶ ಗುಂಡ್ಲೂರ, ರುದ್ರ​‍್ಪ ಹೊಸಮನಿ, ರಾಜು ಭರಮಗೌಡ್ರ, ಬಸವರಾಜ ಭಜಂತ್ರಿ, ವಿರೇಶ ಹೊಳೆಪ್ಪನವರ, ಆನಂದ ಮೂಗಿ ಸೇರಿದಂತೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ