ಹೂವಿನ ಹಡಗಲಿ

ಹೂವಿನಹಡಗಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕಗೆ ಬಿ.ಫಾರಂ: ಟೆಂಪಲ್ ದರ್ಶನ

ಹೂವಿನಹಡಗಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕಗೆ ಬಿ.ಫಾರಂ: ಟೆಂಪಲ್ ದರ್ಶನ

ಲೋಕದರ್ಶನ ವರದಿ

ಹೂವಿನಹಡಗಲಿ17: ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಕೃಷ್ಣನಾಯ್ಕ ಅವರಿಗೆ ಉಮೇದುವಾರಿಕೆ ಸಲ್ಲಿಕೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡುವ ಮೂಲಕ ಬಿ.ಫಾರಂನ್ನು ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲರ ಮೂಲಕ ನೀಡಲಾಗಿದೆ. ನಂತರ ತಾಲೂಕಿನ ನಾನಾ ಸುಕ್ಷೇತ್ರ ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಿದ್ದಾರೆ.

ಇದೇ ವೇಳೆ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೆಚ್.ಪೂಜಪ್ಪ,ಮಂಡಲ ಅಧ್ಯಕ್ಷ ಸಂಜೀವರೆಡ್ಡಿ,ಜಿಲ್ಲಾ ಒಬಿಸಿ ಮೋರ್ಚಾ  ಅಧ್ಯಕ್ಷ ಈಟಿ.ಲಿಂಗರಾಜ,ಎಸ್ಟಿ ಮೋರ್ಚಾ  ಅಧ್ಯಕ್ಷ ಕರೆಂಗಿ ಸುಭಾಶ್ಚಂದ್ರ,ಜಿ.ಪರಶುರಾಮ ಇದ್ದರು.ಬಿ.ಫಾರಂ ಸ್ವೀಕರಿಸಿದ ಕೃಷ್ಣನಾಯ್ಕ ನೇರವಾಗಿ ಕಾಗಿನೆಲೆ ತೆರಳಿ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಮೈಲಾರ ಸುಕ್ಷೇತ್ರಕ್ಕೆ ಆಗಮಿಸಿ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರು.

ಕಳೆದ ಐದು ದಿನಗಳ ಹಿಂದೆ ಬಿಜೆಪಿ ಬಿಡುಗಡೆಗೊಳಿಸಿದ ಅಭ್ಯರ್ಥಿ ಗಳ ಮೊದಲ ಪಟ್ಟಿಯಲ್ಲಿ ಕೃಷ್ಣನಾಯ್ಕ ಹೆಸರು ಘೋಷಣೆಯಾಗಿದ್ದರೂ ಅವರಿಗೆ ಬಿ.ಫಾರಂ ನೀಡಿರಲಿಲ್ಲ. ಟಿಕೆಟ್ ವಂಚಿತ 12ಜನ ಆಕಾಂಕ್ಷಿಗಳು ಬೆಂಗಳೂರಿನಲ್ಲೇ ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಪಟ್ಟಣದ ಬಿಜೆಪಿ ಕಚೇರಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.ನಂತರ ವರಿಷ್ಠರು ಬಿ.ಫಾರಂ ತಡೆ ಹಿಡಿದಿದ್ದರಿಂದ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾಯಿಸುತ್ತಾರೆ ಎಂಬ ಚರ್ಚೆ  ಹೂವಿನಹಡಗಲಿ ತಾಲೂಕಿನಲ್ಲಿ ನಡೆಯಿತಿತ್ತು,

ಚುನಾವಣೆ ಸಮೀಪಸುತ್ತಿದ್ದಂತೆ ಇದೀಗ ಬಿಜೆಪಿ ಅಭ್ಯರ್ಥಿ  ಕೃಷ್ಣನಾಯ್ಕ ಅವರು ಪಕ್ಷದ ಮುಖಂಡರು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ಕರೆದುಕೊಂಡು ಚುನಾವಣಾ ಕಾರ್ಯದಲ್ಲಿ ತೊಡಗುವಂತೆ ಮಾರ್ಗದರ್ಶನ ಮಾಡಿ ಬಿ.ಫಾರಂ ವಿತರಿಸಿದ್ದಾರೆ.ಇತ್ತ ತಾಲೂಕಿನ ಇಟ್ಟಿಗಿ ಹೋಬಳಿಯ ಬಿಜೆಪಿ  ಬಿಜೆಪಿ ಕಾರ್ಯಕರ್ತರು ಸೋಮವಾರ ಅಭ್ಯರ್ಥಿ  ಬದಲಾವಣೆಗೆ ಆಗ್ರಹಿಸಿದರು.

ಸುದ್ದಿ ಓದಿ