ರಾಣೆಬೆನ್ನೂರ

ಬಿ.ಸಿ.ಎ. - ಬಿ.ಎ. ಪದವಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಷಯ ಆರಂಭಿಸಲು ಶಾಸಕರಿಗೆ ಎಸ್ಎಫ್ಐ ಮನವಿ.

ಬಿ.ಸಿ.ಎ. - ಬಿ.ಎ. ಪದವಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಷಯ ಆರಂಭಿಸಲು ಶಾಸಕರಿಗೆ ಎಸ್ಎಫ್ಐ ಮನವಿ.

ರಾಣೆಬೆನ್ನೂರು: ಜೂ 7 ಉದ್ಯೋಗದಲ್ಲಿ ವಿಪುಲ ಅವಕಾಶವಿರುವ  ಬಿಸಿಎ ಹಾಗೂ ಬಿ ಎ  ಪದವಿ ಕಂಪ್ಯೂಟರ್ ಅಪ್ಲಿಕೇಶನ್  ವಿಸಯವನ್ನು ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭಿಸುವಂತೆ ಒತ್ತಾಯಿಸಿ, ಎಸ್ ಎಫ್ ಐ  ಕಾರ್ಯಕರ್ತರು ಸ್ಥಳೀಯ ಶಾಸಕ ಪ್ರಕಾಶ್ ಕೋಳಿವಾಡವರಿಗೆ ತಮ್ಮ ಮನವಿ ಸಲ್ಲಿಸಿ ಒತ್ತಾಯಿಸಿದರು.

ನಗರದ ವಾಗೀಶ ನಗರದಲ್ಲಿರುವ ಶಾಸಕರ ಕಛೇರಿಯಲ್ಲಿ ಶೈಕ್ಷಣಿಕ ಶಿಕ್ಷಣ ವಿಚಾರಗಳ ಕುರಿತು ಚರ್ಚೆ ಮಾಡಿ ಉದ್ಯೋಗದಲ್ಲಿ ವಿಫಲ ಅವಕಾಶಗಳಿರುವ ಬಿ.ಸಿ.ಎ. ಹಾಗೂ ಬಿ.ಎ. ಪದವಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಷಯವನ್ನು ರಾಣೇಬೆನ್ನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭಿಸಲು ಒತ್ತಾಯಿಸಿ ಎಸ್ಎಫ್ಐ ಮುಖಂಡರು  ಕಾರ್ಯಕರ್ತರು ನೂತನ ಶಾಸಕ ಪ್ರಕಾಶ್ ಕೋಳಿವಾಡ ರವರಿಗೆ ತಮ್ಮ ಮನವಿ ಸಲ್ಲಿಸಿದರು.   

   . ಬಿಸಿಎ ( ಬ್ಯಾಚುಲರ್ ಆಪ್ ಕಂಪ್ಯೂಟರ್ ಅಪ್ಲಿಕೇಶನ್ ) ಪದವಿ   ಹೊಂದಬೇಕಾದರೆ, ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಸಮುದಾಯ ಬಹು ದೂರದ ಜಿಲ್ಲೆಗಳಿಗೆ ಹೋಗಬೇಕಾಗುತ್ತದೆ. ಅಲ್ಲದೆ ಹಾವೇರಿ ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ  ವೃತ್ತಿಪರವಾದ ಬಿಸಿಎ ಪದವಿ ವ್ಯಾಸಂಗವು ಕೇವಲ ಖಾಸಗಿ ಶಿಕ್ಷಣ ಸಂಸ್ಥೆಯ ಕಾಲೇಜುಗಳಲ್ಲಿ ಇವೆ.. ಸರ್ಕಾರಿ ಪದವಿ ಕಾಲೇಜುಗಳು ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದಲ್ಲಿ ಮುಂದಿರುವಾಗ ಬಿಸಿಎ ನಂತಹ ವೃತ್ತಿಪರ ಕೋರ್ಸುಗಳನ್ನೇಕೆ ಆರಂಭಿಸುತ್ತಿಲ್ಲ ಎನ್ನುವುದು ತಿಳಿಯದಂತಾಗಿದೆ ಎಂದು ಸಲ್ಲಿಸಿರುವ ಮನವಿಯಲ್ಲಿ ವಿಷಾದಿಸಿದ್ದಾರೆ. ಪ್ರಸ್ತುತ ಹಾವೇರಿಯ ಖಾಸಗಿ ಕಾಲೇಜಿನಲ್ಲಿ ಮಾತ್ರ ಬಿಸಿಎ ಪದವಿ ಕೋರ್ಸು ಇದ್ದು, ಅಲ್ಲಿ ಸಾವಿರಾರು ರೂಪಾಯಿ ಶುಲ್ಕವಿರುತ್ತದೆ. ಮೊದಲೇ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬಳಲುತ್ತಿರುವ ಈ ಭಾಗದ ರೈತ, ಕೂಲಿ ಕಾರ್ಮಿಕರ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದ ಮಕ್ಕಳು, ಗ್ರಾಮೀಣ ಭಾಗದ ಮಕ್ಕಳಿಗೆ ಇಷ್ಟು ಅಧಿಕ  ಮೊತ್ತದ ಶುಲ್ಕ ಭರಿಸಿ ಬಿಸಿಎ ಪದವಿ ಕೋರ್ಸು ಪ್ರವೇಶ ಪಡೆದುಕೊಳ್ಳುವುದು ಕಷ್ಟಸಾಧ್ಯವಾದ ಮಾತಾಗಿದೆ. ಈ ಕೂಡಲೇ ಸದರಿ ಕೋರ್ಸನ್ನು ರಾಣೇಬೆನ್ನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಸಿಎ (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್) ಪದವಿಯನ್ನು ಹೊಸದಾಗಿ ಆರಂಭಿಸಿದಲ್ಲಿ ರಾಣೇಬೆನ್ನೂರು ಅಷ್ಟೇ ಅಲ್ಲದೇ ಇಡೀ  ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎಂದಿದ್ದಾರೆ.       

  ರಾಣೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023_24ನೇ ಸಾಲಿನಿಂದ ಬಿಸಿಎ ಪದವಿ ಆರಂಭಿಸಲು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಆಗ್ರೇಯಿಸಿದ್ದು, ಶಾಸಕರು ಇತ್ತ ಕಡೆ ಗಮನಹರಿಸಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು  ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಶಾಸಕರಲ್ಲಿ ಒತ್ತಾಯಿಸಲಾಯಿತು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್,  ತಾಲ್ಲೂಕ ಅಧ್ಯಕ್ಷ ಶ್ರೀಧರ್ ಸಿ,  ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಉಪಾಧ್ಯಕ್ಷರಾದ ವೀಣಾ ಘಂಟೇರ್,  ನೆಹಲ್ ಖಾನ್ ಗಂಗಾವತಿ, ಪ್ರಜ್ವಲ್ ಕಾಕೋಳ ಸೇರಿದಂತೆ ಮತ್ತಿತರೆ ಮುಖಂಡರು  ಪಾಲ್ಗೊಂಡಿದ್ದರು.

ಸುದ್ದಿ ಓದಿ