ಇಂಡಿ

ಅಧ್ಯಕ್ಷರಾಗಿ ಬಿ.ಡಿ. ಪಾಟೀಲ ನೇಮಕ

ಅಧ್ಯಕ್ಷರಾಗಿ ಬಿ.ಡಿ. ಪಾಟೀಲ ನೇಮಕ

ಇಂಡಿ. ಇಂಡಿ ತಾಲೂಕಿನ ಮಸಳಿ ಗ್ರಾಮದ ತಾಲೂಕಾ ಪಂಚಾಯತಿ ಮಾಜಿ ಸದಸ್ಯ ಮಹಮ್ಮದ ಪಟೇಲ್ ಅವರನ್ನು ಜೆಡಿಎಸ್ ರೈತಘಟಕ ಅಧ್ಯಕ್ಷರಾಗಿ ಬಿ.ಡಿ. ಪಾಟೀಲರು ನೇಮಕ ಮಾಡಿ ಆದೇಶ ಪತ್ರ ನೀಡಿದರು.  

ಶನಿವಾರ ಪಟ್ಟಣದ ಜೆಡಿಎಸ್ ಕಾರಾ​‍್ಯಲಯದಲ್ಲಿ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ತಾಲೂಕಾ ರೈತಘಟಕ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅವರು ಮಾತನಾಡಿ, ಬಡವರ ಪರವಾದ ಕಾಳಜಿ, ಹಾಗೂ ನೀರಾವರಿ ಹರಿಕಾರ ಮಾಜಿ ಪ್ರಧಾನಮಂತ್ರಿ ದೇವೇಗೌಡರ ರೈತಪರ ಕಾಳಜಿ, ಎಚ್‌.ಡಿ. ಕುಮಾರಸ್ವಾಮಿ ಅವರು ಸಾಲಮನ್ನಾ, ಗ್ರಾಮ ವಾಸ್ತವ್ಯ, 2023ರಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ವೃದ್ಯಾಪ್ಯ ವೇತನ 5000 ಸಾವಿರ ಮಾಡುವ ನಿರ್ದಾರ ಕುಮಾರಸ್ವಾಮಿರವರು ಮಾಡಿದು ಜನರಿಗೆ ತಿಳಿಸಬೇಕು ಎಂದರು. 

ಆರ್‌.ಕೆ. ಪಾಟೀಲ, ಪುರಸಭಾ ಮಾಜಿ ಸದಸ್ಯ ಸಿದ್ದು ಡಂಗಾ, ಮಜಿದ್ ಸೌದಾಗರ, ಮಹಿಬೂಬ ಬೇನೂರ, ಸೋಮನಿಂಗ್ ಅವಜಿ, ರಾಜು ಮುಲ್ಲಾ, ಇರ್ಫಾನ ಅಗರಖೇಡ, ಫಜಲು ಮುಲ್ಲಾ, ಮಾಳು ಮ್ಯಾಕೇರಿ ಸೇರಿದಂತೆ ಜೆಡಿಎಸ್ ಪಕ್ಷದ ಕಾರ‌್ಯಕರ್ತರು ಹಾಗೂ ಬಿ.ಡಿ. ಪಾಟೀಲರ ಅಭಿಮಾನಿಗಳು ಇದ್ದರು.  


ಸುದ್ದಿ ಓದಿ