ಇಂಡಿ

ಆಲಮಟ್ಟಿ ಆಣೆಕಟ್ಟು ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕೆಂದು ಬಿ.ಡಿ. ಪಾಟೀಲ ಆಗ್ರಹ

ಆಲಮಟ್ಟಿ ಆಣೆಕಟ್ಟು ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕೆಂದು  ಬಿ.ಡಿ. ಪಾಟೀಲ ಆಗ್ರಹ


ಇಂಡಿ: ಇಂಡಿ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು 42 ದಿನಗಳ ವರೆಗೆ ಮಿನಿ ವಿಧಾನಸೌಧ ಎದುರು ಧರಣಿ ಸತ್ಯಾಗ್ರಹ ನಡೆಸಿದರೂ ಸರಕಾರ ಸ್ಪಂದಿಸಿಲ್ಲ. ಈಗ ಅಧಿವೇಶನ ಪ್ರಾರಂಭವಾಗುತ್ತಿದ್ದು ಆಲಮಟ್ಟಿ ಆಣೆಕಟ್ಟು ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಜೆ.ಡಿ.ಎಸ್‌. ಪಕ್ಷದ ವತಿಯಿಂದ ಇಂಡಿ ಶಾಖಾ ಕಾಲುವೆಗೆ ಫೆ. 15ರಂದು ಆರತಿ ನಡೆಸಿ ಸರಕಾರದ ಗಮನ ಸೆಳೆಯಲು ನಾವು ಮುಂದಾಗಿದ್ದೇವೆ ಎಂದು ಜೆಡಿಎಸ್ ತಾಲೂಕ್ಷಾಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು. 

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಸದನದಲ್ಲಿ ನಮ್ಮ ಹೋರಾಟದ ಬಗ್ಗೆ ಗಮನ ಸೆಳೆಯಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ಮಾತುಕತೆೆ ನಡೆಸಿದ್ದೇವೆ. ನಮ್ಮ 42 ದಿನದ ಹೋರಾಟ ರೈತರ ಪರವಾಗಿತ್ತು ಎಂದರು. 

ಇಂಡಿ ತಾಲ್ಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ನೀರು ಹರಿಸಬೇಕು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪೂರ್ಣ ಮಾಡಬೇಕು. ಆಲಮಟ್ಟಿ ಅಣೆಕಟ್ಟು 524 ಮೀ, ಎತ್ತರಿಸಬೇಕು. ಇಂಡಿ ಶಾಖಾ ಕಾಲುವೆ ಸಂಪೂರ್ಣ ಹಾಳಾಗಿದ್ದು ಅದನ್ನು ಪುನರ್ ನಿರ್ಮಾಣ ಮಾಡಬೇಕು. ಸಂಪೂರ್ಣ ಇಂಡಿ ತಾಲ್ಲೂಕನ್ನು ನೀರವರಿಗೆ ಒಳಪಡಿಸಬೇಕು. ಈಗ ಪ್ರಾರಂಭವಾಗುವ ಬಜೆಟ್‌ನಲ್ಲಿ ಈ ಎಲ್ಲ ಯೋಜನೆಗಳಿಗೆ ಅನುದಾನ ಮೀಸಲಿರಿಸಬೇಕು.  

ಹಿಂದೆ ಎಚ್‌.ಡಿ. ದೇವೆಗೌಡರು ಕೃಷ್ಣಾ ಕಾಲುವೆಗೆ ಹಣ ನೀಡಿ ಮುಖ್ಯ ಕಾಲುವೆ ಯೋಜನೆ ಆಗಲು ಕಾರಣೀಕರ್ತರಾಗಿದ್ದರು. ಅದರಂತೆ ಕುಮಾರಸ್ವಾಮಿಯವರು ಮೈತ್ರಿ ಸರಕಾರವಿದ್ದಾಗ ರೇವಣಸಿದ್ದೇಶ್ವರ ಯೋಜನೆಗೆ 250 ಕೋಟಿ ರೂ ಮಂಜೂರಾತಿ ನೀಡಿದ್ದು ಈಗಿನ ಸರಕಾರ ನಮ್ಮ ಭಾಗದ ರೈತರಿಗೆ ವಿಶೇಷ ಅನುದಾನ ನೀಡಬೇಕೆಂದು ಆಗ್ರಹಿಸಿದರು. 

ಈ ಸಂದರ್ಭದಲ್ಲ್ಲಿ ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ಅಯೂಬ ನಾಟಿಕಾರ, ಪೀರ​‍್ಪ ಹೊಟಕರ ಮತ್ತಿತರಿದ್ದರು. 


ಸುದ್ದಿ ಓದಿ