ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಬಿ.ಸಿ.ಪಾಟೀಲ ಆಯ್ಕೆ
ಶಿಗ್ಗಾವಿ 29: ಚಾಕಾಪೂರ ಗ್ರಾಮದ ಕಾಂಗ್ರೇಸ ಮುಖಂಡ ಹಾಗೂ ಹನುಮರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ .ಸಿ. ಪಾಟೀಲ್ ಇವರನ್ನು ಶಿಗ್ಗಾವಿ ತಾಲೂಕ ಬ್ಲಾಕ್ ಕಾಂಗ್ರೇಸ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿ ಅವರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ದನೆಗೆ ಕಾರ್ಯೋನ್ಮುಖರಾಗಬೇಕು ಎಂದು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ನೇಮಕ ಮಾಡಿ ಆದೇಶಿಸಿದ್ದಾರೆ.