ರಾಣೆಬೆನ್ನೂರ

ಅಜೀಂ ಪ್ರೇಮ್ ಜಿ ಫೌಂಡೇಶನ್‌: ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮ

ಅಜೀಂ ಪ್ರೇಮ್ ಜಿ ಫೌಂಡೇಶನ್‌: ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮ

ರಾಣಿಬೆನ್ನೂರ 04: ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಪದಾರ್ಥಗಳಾಗಿದ್ದು, ಅಜೀಂ ಪ್ರೇಮ್ ಜಿ ಫೌಂಡೇಶನ್ ಅವರಿಗೆ ತಾಲೂಕಿನ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಸರ್ಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಬೆಂಗಳೂರಿನ ಅಜೀಂ ಪ್ರೇಮಜಿ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಠಿಕತೆ ವೃದ್ಧಿಸಲು  ವಾರದಲ್ಲಿ 6 ದಿನಗಳು ಮೊಟ್ಟೆ, ಶೇಂಗಾ ಚೆಕ್ಕಿ, ಬಾಳೆಹಣ್ಣು ಉಚಿತವಾಗಿ ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಅವರು ಅಕ್ಷರ ದಾಸೋಹ ಕಾರ್ಯಕ್ರಮದ ಕುರಿತು ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ. ಅಡಿವೇರ, ಸಿಆರ್‌ಪಿ ಗೀರೀಶ ರಾಠೋಡ, ಎಂ.ಸಿ. ಬಲ್ಲೂರ, ನಾಗರಾಜ ಚಿನ್ನಿಕಟ್ಟಿ, ಬಿ.ಜಿ. ತಾಯಮ್ಮನವರ, ಹುಚ್ಚಪ್ಪ ಬಿಂಗೇರ, ಮಹೇಶ್ವರ​‍್ಪ ಎನ್‌. ವಿದ್ಯಾವತಿ,  ಎಸ್‌.ಎಚ್‌. ಮೇಟಿ, ಆರ್‌.ಎಚ್‌. ಡೊಂಬರ, ಎನ್‌.ಕೆ. ಅರ್ಕಾಚಾರಿ, ವಿರೇಶ ಮುಂಡಾಸದ, ಕರಿಯಪ್ಪ ಪೂಜಾರ, ದಿಳ್ಳೆಪ್ಪ ಅಣ್ಣೆರ, ರಮೇಶ ಕೊರವರ, ಮೈಲಪ್ಪ ಬಡಪ್ಪಳವರ, ಬೀರೇಶ ವ್ಯಾಪಾರಿ, ನೀಲಪ್ಪ ಗೊರಮಾಳರ, ಮಂಜು ರಾವಳವರ, ದಿಳ್ಳೆಪ್ಪ ಚಿನ್ನಿಕಟ್ಟಿ, ಹುಲಿಯಪ್ಪ ಪೂಜಾರ,  ಶಿಕ್ಷಕರು ಹಾಗೂ ಸಿಬ್ಬಂದಿ, 6 ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಮೇಡ್ಲೇರಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಇದ್ಯಾರ್ಥಿಗಳು ಇದ್ದರು.   

ಸುದ್ದಿ ಓದಿ