ಆಯುಷ್ಮಾನ್ ಭಾರತ ಯೋಜನೆ ಸ್ಥಗಿತ: ಸಾರ್ವಜನಿಕರಿಗೆ ತೊಂದರೆ
ಗುಳೇದಗುಡ್ಡ 26: ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರ ಆರೋಗ್ಯ ರಕ್ಷಣೆಗೆ ಸರಕಾರ ರೂಪಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಒಂದು ತಿಂಗಳಿನಿಂದ ಸ್ಥಗಿತಗೊಂಡಿದೆ.
ನೋಂದಣಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಆರೋಗ್ಯ ಮಿತ್ರರಾದ ಭಾರ್ಗವಿ ಹಾಲಪ್ಪನವರನ್ನು ಪ್ರಶ್ನಿಸಿದಾಗ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ. ಬಾಗಲಕೋಟ ಜಿಲ್ಲಾ ಆಸ್ಪತ್ರೆಯಲ್ಲಿ ಸಂಬಂಧಿಸಿದವರಿಗೆ 2-3 ಸಾರಿ ಮಾಹಿತಿ ನೀಡಿದರೂ ಏನ್ನೂ ಪ್ರಯೋಜನವಾಗಿಲ್ಲ ಎಂದರು.
ಬಿ.ಪಿ.ಎಲ್, ಎ.ಪಿ.ಎಲ್ ಹಾಗೂ ಆಧಾರ್ ಕಾರ್ಡಗಳನ್ನು ಅರ್ಹತಾ ಮಾನದಂಡಗಳನ್ನಾಗಿ ಇಟ್ಟುಕೊಂಡು ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡು ಕಾರ್ಡ ನೀಡುವ ಮೂಲಕ ಬಡವರಿಗೆ ಈ ಯೋಜನೆ ವರದಾನವಾಗಿದೆ. ಬಿ.ಪಿ.ಎಲ್ ನವರಿಗೆ 5ಲಕ್ಷ, ಎ.ಪಿಎಲ್ ನವರಿಗೆ ಶೇ30ಅ ರಷ್ಟು ಗರಿಷ್ಠ 1.5ಲಕ್ಷ ರೂ. ವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಕೋವಿಡ್ನಂತಹ ಸಂಕಷ್ಟ ಸ್ಥಿತಿಯಲ್ಲೂ ಅನಾರೋಗ್ಯಕರವಾದ ವಾತಾವರಣದಲ್ಲಿ ಇದು ಹೆಚ್ಚು ಅವಶ್ಯಕತೆ ಇದೆ.
ಯೋಜನೆಯ ಲಾಭಗಳೇನು? : ಅಂಗಾಂಗ ಕಸಿ ಯೋಜನೆಯಲ್ಲಿ ಬಡವರಿಗೆ ಕಿಡ್ನಿ, ಹೃದಯ ಮತ್ತು ಲಿವರ್ ಅಂಗಾಂಗಗಳನ್ನು ಉಚಿತವಾಗಿ ಕಸಿ ಮಾಡುತ್ತಾರೆ. ಜೊತೆಗೆ ಜೌಷದಿ ವೆಚ್ಚವಾಗಿ 1 ಲಕ್ಷ ರೂ. ಗಳವರೆಗೆ ಫಲಾನುಭವಿಗೆ ಒಂದು ವರ್ಷಕ್ಕೆ ನೀಡಲಾಗುತ್ತದೆ ಸರ್ಕಾರಿ ಆಸ್ಪತ್ರೆಗಳಿಗೆ ರೆಫರ್ ಮಾಡಬಹುದು ಈ ಯೋಜನೆ 2018 ರಿಂದಲೇ ಜಾರಿಗೆ ಬಂದಿರುವುದರಿಂದ ಜನರಿಗೆ ಅನೂಕೂಲವಾಗಿದೆ.
ಅನುದಾನ ಹಂಚಿಕೆ ವಿವರ: ಈ ಯೋಜನೆಯಲ್ಲಿ ರಾಜ್ಯದ 115 ಲಕ್ಷ (ಬಿ.ಪಿ.ಎಲ್) ಕುಟುಂಬಗಳಲ್ಲಿ 62 ಲಕ್ಷ ಕುಟುಂಬಗಳಿಗೆ (ಆರ್.ಎಸ್.ಬಿ.ವೈ ನೋಂದಯಿತ) ಕೇಂದ್ರ ಸರ್ಕಾರವು ಶೇ 60 ರಷ್ಟು ಅನುದಾನ ಭರಿಸುತ್ತದೆ ಇನ್ನುಳಿದ 53 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರ ಅನುದಾನ ಭರಿಸುತ್ತದೆ.
ಸಾರ್ವಜನಿಕರ ಆಗ್ರಹ: ಸರ್ವರಿಗೂ ಆರೋಗ್ಯ ಸೇವೆ ಒದಗಿಸಿರುವ ಮಹತ್ವದ ಯೋಜನೆ ಇದಾಗಿದೆ. ನಿತ್ಯ ನೂರಾರು ಜನರು ಹೆಸರು ನೋಂದಾಯಿಸಲು ಕಛೇರಿಗೆ ಬರುತ್ತಾರೆ. ನೋಂದಣೆ ಸ್ಥಗಿತಗೊಂಡಿರು ನೋಂದಣೆಯನ್ನು ಬೇಗನೆ ಆರಂಭಿಸಬೇಕೆಂದು ಎಸ್.ಬಿ.ಶಿರೂರ, ಶಂಕ್ರ್ಪ ಮುಂಡಾಸ, ಹಿರಿಯ ನಾಗರಿಕ ಸಂಗಮೇಶ ರಾ್ಯಕಾ ಅಗ್ರಹಿಸಿದ್ದಾರೆ.
ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದೆ ಸರಿಪಡಿಸಲು ಜಿಲ್ಲಾ ಆಸ್ಪತ್ರೆಯವರ ಗಮನಕ್ಕೆ ತರಲಾಗಿದೆ’
- ಡಾ.ನಾಗರಾಜ ಕುರಿ
ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ, ಗುಳೇದಗುಡ್ಡ.
ಆಯುಷ್ಮಾನ್ ಭಾರತ ಯೋಜನೆ ಸ್ಥಗಿತವಾಗಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗನೆ ಆರಂಭಿಸುತ್ತೇವೆ’ -
ಶ್ವೇತಾ ಹಾದಿಮನಿ
ಕೋ-ಆಡಿನೇಟರ್ ಆಯುಷ್ಮಾನ್ ಭಾರತ ಯೋಜನೆ ಜಿಲ್ಲಾ ಘಟಕ ಬಾಗಲಕೋಟ