ಕಾಗವಾಡ

ಶೇಡಬಾಳದಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡು ಜಾಗೃತಿ

ಶೇಡಬಾಳದಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡು ಜಾಗೃತಿ

ಪಾಯಗೌಡ ಪಾಟೀಲ ಅಭಿಮತ: ಶಿವಾನಂದ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯಡಿ ಶೇಡಬಾಳ ಗ್ರಾಮ ದತ್ತು  

ಶೇಡಬಾಳ 27: ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಕಳೆದ ನಾಲ್ಕೈದು ವರ್ಷಗಳಿಂದ ಶೇಡಬಾಳ ಗ್ರಾಮವನ್ನು ದತ್ತು ಪಡೆದು ವಿವಿಧ ರೀತಿಯಿಂದ ಗ್ರಾಮವನ್ನು ಜಾಗೃತಿಗೊಳಿಸಿದ್ದಾರೆಂದು ಪಾಯಗೌಡ (ವಿನೋದ) ಬಸಗೌಡ ಪಾಟೀಲ ಹೇಳಿದರು. 

ಕಾಗವಾಡ ಶಿವಾನಂದ ಮಹಾವಿದ್ಯಾಲಯ, ಕಾಗವಾಡದ ರಾಷ್ಟ್ರೀಯ ಸೇವಾ ಯೋಜನೆಯ ಎರಡೂ ಘಟಕಗಳ (ಕೇಂದ್ರ ಮತ್ತುರಾಜ್ಯಘಟಕ) 2021-22ನೇ ಸಾಲಿನ 7 ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ದಿ. 24ರಂದು ದತ್ತು ಗ್ರಾಮ ಶೇಡಬಾಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

"ಅಮೃತ ಸಮುದಾಯ ಅಭಿವೃದ್ಧಿ ಯೋಜನೆ" ಎಂಬ ಧ್ಯೇಯವನ್ನು ಇಟ್ಟುಕೊಂಡು ಶಿಬಿರವು 7 ದಿನಗಳ ಕಾಲ ದತ್ತು ಗ್ರಾಮವಾದ ಶೇಡಬಾಳವನ್ನು ವ್ಯಸನ ಮುಕ್ತ ಆರೋಗ್ಯಕರ ಹಾಗೂ ರಸ್ತೆಗಳ ನಿರ್ವಹಣೆ ಮತ್ತು ಸ್ವಚ್ಛತೆ ಮಾರಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಶಿಬಿರಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.  

ಅಶ್ವಥ ಪಾಟೀಲ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಅವರು ಸೇವಾ ಯೋಜನೆಯ ಘಟಕಗಳಿಗೆ ಗ್ರಾಮದಲ್ಲಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಎನ್‌ಎಸ್‌ಎಸ್‌ನ ಪ್ರಮುಖವಾದ ಧ್ಯೇಯವೆಂದರೆ ಕಲಿಕೆ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವಂತೆ ಮಾಡುವುದು. ಈ ಸೇವೆಯು ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮವಾಗಿರುತ್ತದೆ. ಇಲ್ಲಿ ಕಾರ್ಯಕ್ರಮಾಧಿಕಾರಿಗಳು ನಿಮಿತ್ಯ ಮಾತ್ರವಾಗಿ ವಿದ್ಯಾರ್ಥಿಗಳಿಗೆ ಯೋಜನೆ ಅನುಷ್ಠಾನದ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡುತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ವ್ಹಿ.ಎಸ್‌.ತುಗಶೆಟ್ಟಿಯವರು ಮಾತನಾಡುತ್ತಾ ಮಕ್ಕಳು ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ ಸಮುದಾಯದ ಜನರೊಂದಿಗೆ ಬೆರೆತು, ಅವರ ನೋವು-ನಲಿವು, ಸುಖ-ದುಃಖ, ಕಷ್ಟ ಕಾರ​‍್ಪಣಯಗಳಲ್ಲಿ ಪಾಲ್ಗೊಳುವುದರಿಂದ ಸಮಾಜದ ಹಾಗೂ ದೇಶದ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೂರೈಸಿಕೊಳ್ಳುವುದು ಎನ್‌.ಎಸ್‌.ಎಸ್‌ನ ಪ್ರಧಾನ ಕಾರ್ಯಗಳಲ್ಲೊಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಸಮುದಾಯದೊಂದಿಗೆ ಸೇರಿ ಒಂದೇ ವೇದಿಕೆಯಲ್ಲಿ ತಮ್ಮಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಸಹಾಯ ಮಾಡಿ ಆ ಮೂಲಕ ರಾಷ್ಟ್ರದ  ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಎಂದರು. 

ಈ ಸಮಯದಲ್ಲಿ  ವಿಶ್ರಾಂತ ಮುಖ್ಯೋಪಾಧ್ಯಾಯರಾದ ಕುಮಾರ ಮಾಲಗಾಂವೆ, ಭರತ ಪಾಟೀಲ, ವಿನೋದ ಬರಗಾಲೆ, ಶಿವಕುಮಾರ ಶಿಂಧೆ, ಭರತೇಶ ಪಾಟೀಲ, ಪಟ್ಟಣ ಪಂಚಾಯತಿ ಸಿಓಗಳಾದ ಮಹಾಂತೇಶ ಕೊಲಾಪುರೆ, ಎಂ.ಎ.ಗಣೆ, ಎಂ.ಡಿ.ಅಲಾಸೆ, ಸ್ವ-ಆರ್ಥಿಕ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ​‍್ರೊ.ಎಸ್‌.ಎಂ.ಘೋರೆ್ಪಡ ಹಾಗೂ ಶಿವಾನಂದ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.  

ಎನ್‌ಎಸ್‌ಎಸ್ ಶಿಬಿರಾರ್ಥಿಗಳಾದ ಕು.ರೋಹಿಣಿ ಕಾಂಬಳೆ ಹಾಗೂ ಸಂಗಡಿಗರು ಎನ್‌ಎಸ್‌ಎಸ್‌ಗೀತೆಯನ್ನು ಪ್ರಸ್ತುತ ಪಡಿಸಿದರು. ಪ್ರಾರ್ಥನಾ ಗೀತೆಯನ್ನು ಕು.ಲಕ್ಷ್ಮೀ ಅಕಿವಾಟೆ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಕಾರ್ಯಕ್ರಮಾಧಿಕಾರಿಗಳಾದ ಡಾ.ಆರ್‌.ಎಸ್‌.ಕಲ್ಲೋಳಿಕರ ವಂದಿಸಿದರು. ಪ್ರೊ.(ಮಿಸ್). ವ್ಹಿ.ವ್ಹಿ.ಪಾಟೀಲ, ಪ್ರೊ.(ಮಿಸ್). ಪಿ.ವ್ಹಿ.ಕಿನಂಗೆ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ