ಬೆಳಗಾವಿ

ವಿಶ್ವ ನ್ಯುಮೋನಿಯಾ ದಿನ ಕುರಿತು ಜಾಗೃತಿ ; ನೇರ ಪೋನ್‌-ಇನ್ ಕಾರ್ಯಕ್ರಮ

ವಿಶ್ವ ನ್ಯುಮೋನಿಯಾ ದಿನ ಕುರಿತು ಜಾಗೃತಿ ; ನೇರ ಪೋನ್‌-ಇನ್ ಕಾರ್ಯಕ್ರಮ

ಲೋಕದರ್ಶನ ವರದಿ 

               ಬೆಳಗಾವಿ 13 : ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಶುಕ್ರವಾರ 13ನೆ ನವೆಂಬರ್ 2026 ರಂದು ವಿಶ್ವ ನ್ಯುಮೋನಿಯಾ ದಿನ ಕುರಿತು ನೇರ ಫೋನ್‌-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯೆ ಮತ್ತು ಪ್ರಾಧ್ಯಾಪಕಿ ಡಾ. ಜ್ಯೋತಿ ಹಟ್ಟಿಹೋಳಿ ಅವರು ಭಾಗವಹಿಸಿ ವಿಶ್ವ ನ್ಯುಮೋನಿಯಾ ದಿನದ ಇತಿಹಾಸ, ಈ ವರ್ಷದ ಘೋಷವಾಕ್ಯ, ನ್ಯುಮೋನಿಯಾದ ಕಾರಣಗಳು, ಲಕ್ಷಣಗಳು, ಹರಡುವಿಕೆ ಹಾಗೂ  ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು.  

                ನ್ಯುಮೋನಿಯಾ ಶ್ವಾಸಕೋಶಗಳಿಗೆ ತಗಲುವ ಒಂದು ಸೊಂಕು, ಬಾಯಿ ಅಥವಾ ಮೂಗಿನ ಮೂಲಕ ನಡೆಸುವ ಉಚ್ಛಾಸದ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮ ಜೀವಿಗಳಿಂದಾಗಿ ಈ ಸೊಂಕು ಉಂಟಾಗುವುದಕ್ಕೆ ನ್ಯುಮೋನಿಯಾ ಎಂದು ಕರೆಯುತ್ತಾರೆ. ನ್ಯುಮೋನಿಯಾ ಒಬ್ಬರಿಂದ ಒಬ್ಬರಿಗೆ ಹರಡುವ ಈ ರೋಗ ಸೊಂಕು ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಹರಡುವ ಸಾಧ್ಯತೆ ಇರುತ್ತದೆ,

              ಈ ಸೊಂಕಿನಿಂದ ವ್ಯಕ್ತಿಯಲ್ಲಿ ಶ್ವಾಸಕೋಶ ಕ್ರಮೇಣವಾಗಿ ಹಾನಿಯಾಗತೊಡಗುತ್ತದೆ ಎಂದು ತಿಳಿಸಿದರು. ನ್ಯುಮೋನಿಯಾಕ್ಕೆ ಮುಂಜಾಗೃತ ಕ್ರಮಗಳು ಮತ್ತು ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು ಹಾಗೂ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್‌. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು. 


ಸುದ್ದಿ ಓದಿ