ಇಂಡಿ

ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮ

ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮ

ಇಂಡಿ: ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ಮದುವೆ ಮಾಡಿದರೆ ಪರಿಣಾಮ ಬೀರುವದು, ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗೀತಾ ಹಿರೇಮನಿ ಹೇಳಿದರು. 

ಅವರು ಶುಕ್ರವಾರ ಪಟ್ಟಣದ ಮಿನಿ ವಿದಾನಸೌಧದಲ್ಲಿ ಬಾಲ್ಯ ವಿವಾಹ, ಪೋಕ್ಸೊ, ಬಾಲಕರ್ಮಿಕರು ಮತ್ತು ಕೋವಿಡ್ 18 ರ ಒಳಗಡೆ ಪ್ರಾಯೋಜಕತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂತೋಷ ಚಾಂದಕವಠೆ ಮಾತನಾಡಿ ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು, ಸಾರ್ವಜನಿಕರು ಈ ಕುರಿತು ಅರಿತುಕೊಳ್ಳಬೇಕು.ಆ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು. ತಮ್ಮ ಮಕ್ಕಳ ಭವಿಷ್ಯ ಉಳಿಸುವ ನಿಟ್ಟಿನಲ್ಲಿ ಎಚ್ಚತ್ತುಕೊಂಡು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು. 

ತಹಸೀಲ್ದಾರ ಸಿ.ಎಸ್‌.ಕುಲಕರ್ಣಿ, ವೈದ್ಯಾಧಿಕಾರಿ ಡಾಽಽ ರಾಜೇಶ ಕೋಳೆಕರ, ಡಾಽಽ ವಿಪುಲ್ ಕೋಳೆಕರ, ಬಸವರಾಜ ರಾಹುರ್,ನೀತಾ ಪುರಂದರೆ ಮತ್ತಿತರಿದ್ದರು. 

ಚಿಕ್ಕಬೇವನೂರ, ಅಂಜುಟಗಿ, ಝಳಕಿ, ಜೇವೂರ, ಬರಡೋಲ, ಗೋಡಿಹಾಳ, ಶಿಗಣಾಪುರ, ಧುಮಕನಾಳ ಗ್ರಾಮಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಯಿತು.

ಸುದ್ದಿ ಓದಿ