ಮಠದ ಆಸ್ತಿ ಕೆಎಲ್ಇಗೆ ನೀಡಿದ ಉದ್ದೇಶದ ಬಗ್ಗೆ ಅರಿವು: ದಿಂಗಾಲೇಶ್ವರ ಶ್ರೀ
ಶಿಗ್ಗಾವಿ 23: ಸುಪ್ರೀಮ್ ಕೋರ್ಟಿನ ಆದೇಶವನ್ನು ತಿದ್ದುಪಡಿಮಾಡಿ ಹುಬ್ಬಳ್ಳಿ ಮೂರುಸಾವಿರ ಮಠದ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೆಎಲ್ಇ ಸಂಸ್ಥೆಗೆ ನೀಡಿರುವುದು ಯಾವ ಉದ್ದೇಶಕ್ಕಾಗಿ ಎಂಬುದನ್ನು ರಾಜ್ಯಾದ್ಯಂತ ಅಂದೋಲನ ಮಾಡಿ ಭಕ್ತರಿಗೆ ತಿಳಿಸಲಾಗುವುದು ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ವೀರಕ್ತಮಠದ ಸಭಾಭವನದಲ್ಲಿ ಮಠ, ಮಂದಿರ ಉಳಿಸಿ ಸಮಾಜವನ್ನು ಬೆಳಸಿ ಅಂದೋಲನದ ಪೂರ್ವ ಭಾವಿ ಸಭೆಯನ್ನುದ್ದೇಸಿಸಿ ಮಾತನಾಡಿ ಈ ನನ್ನ ಹೋರಾಟ ಹುಬ್ಬಳ್ಳಿ ಮೂರುಸಾವಿರಮಠಕ್ಕೆ ಸಿಮಿತವಾಗಿರದೇ ರಾಜ್ಯದ ಸರ್ವ ಹಿಂದು ಧರ್ಮಗಳ ಮಠ, ಮಂದಿರಗಳ ಆಸ್ತಿಗಳನ್ನು ಉಳಿಸಿ ಬೆಳೆಸುವ ಉದ್ದೇಶ ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕೇಲವು ಪಟ್ಟಭದ್ರ ಹಿತಾಶಕ್ತಿಗಳ ಪಿತೂರಿಯಿಂದ ಸುಪ್ರೀಮ್ ಕೋರ್ಟಿನ ಆದೇಶವನ್ನು ತಿದ್ದುಪಡಿ ಮಾಡಿಸಿ ಮೂರುಸಾವಿರ ಮಠದ ಸುಮಾರು ಐದನೂರು ಕೋಟಿ ಮೌಲ್ಯದ ಆಸ್ತಿಯನ್ನು ಕೆ.ಎಲ್.ಇ. ಸಂಸ್ಥೆಗೆ ಮಾರಾಟಮಾಡುವ ಉದ್ದೇಶವಾದರೂ ಏನಿತ್ತು ಎಂದು ಪ್ರಶ್ನಿಸಿದರು. ವಿದ್ಯಾರ್ಥಿಯಾಗಿದ್ದಾಗ ಮೂರು ಸಾವಿರಮಠ ನನಗೆ ಅನ್ನ ನೀಡಿ ಆಶ್ರಯ ನೀಡಿದ ಋಣ ತಿರಿಸುವುದಕ್ಕಾಗಿ ಶ್ರೀಮಠದ ಆಸ್ತಿ ಉಳಿವಿಗಾಗಿ ಹೋರಾಟಮಾಡುತ್ತಿದ್ದೇನೆ. ಇಂತಹ ಹತ್ತು ಹಲವಾರು ವಿಷಯಗಳನ್ನು ಶಿಗ್ಗಾವಿ, ಸವಣೂರ, ಬಂಕಾಪುರ ಹೋಬಳಿಯ ಭಕ್ತಮಹೋದಯರಿಗೆ ತಿಳಿಸುವ ಉದ್ದೇಶಕ್ಕಾಗಿ ಶಿಗ್ಗಾವಿ ಪಟ್ಟಣದಲ್ಲಿ ಬಹಿರಂಗ ಸಭೆ ಮಾಡುವ ಉದ್ದೇಶದಿಂದ ಇಂದು ವೀರಕ್ತಮಠದಲ್ಲಿ ಪೂರ್ವ ಬಾವಿ ಸಭೆ ಕರೆಯಲಾಗಿದೆ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಭಕ್ತಮಹೋದಯರಿಗೆ ಸೂಚಿಸಿದರು.
ವೀರಕ್ತಮಠದ ಶ್ರೀ ಸಂಗನಬಸವ ಸ್ವಾಮಿಜಿ ಸವಣೂರಿನ ದೊಡ್ಡಹುಣಸಿಮಠದ ಶ್ರೀ ಚನ್ನಬಸವ ಸ್ವಾಮಿಜಿ ಸಭೆಯ ಧಿವ್ಯ ಸಾನಿಧ್ಯ ವಹಿಸಿದ್ದರು. ವಿದಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಪ್ರಕಾಶ ಹಾದಿಮನಿ, ಲಲೀತಾ ಹಿರೇಮಠ, ಗಿರಿಜಮ್ಮ, ಶಂಕ್ರಯ್ಯ ಹಿರೇಮಠ, ಶಿವಕುಮಾರ ಅಡವಿಸ್ವಾಮಿಮಠ, ಹನುಮರೆಡ್ಡಿ ನಡವಿನಮನಿ, ಆನಂದ ಕಲ್ಮಠ ಸೇರಿದಂತೆ ಇತರರು ಇದ್ದರು. ನಿವೃತ್ತ ನೌಕರ ಸಂಘದ ತಾಲೂಕಾ ಅಧ್ಯಕ್ಷ ಸಿ.ವಿ.ಮತ್ತಿಕಟ್ಟಿ ನಿರೂಪಿಸಿದರು.