ಸುನೀಲ ಹೀರೆಮನಿಯವರಿಗೆ ಪಿಹೆಚ್‌ಡಿ ಪ್ರದಾನ
ರಾಣೇಬೇನ್ನೂರು 17: ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯಮಹಿಳಾ ಮಹಾವಿದ್ಯಾಲಯ ಹಲಗೇರಿ ರಸ್ತೆ ರಾಣೇಬೆನ್ನೂರನಲ್ಲಿ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿಲ್ ಶಿದ್ದಪ್ಪ ಹೀರೆಮನಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗವು ಪಿಹೆಚ್.ಡಿ.ಪದವಿ ನೀಡಿದೆ.ಇವರು“ ಡೆವಲಪಮೆಂಟಆಪ್ ವುಮೆನ್‌ಥ್ರು ಎನ್‌ಜಿಓಸ್ : ಎ ಕೇಸ ಸ್ಟಡಿಆಫ್ ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್‌ಡೆವಲಪಮೆಂಟ್ ಪ್ರೋಜೆಕ್ಟ“ಎಂಬ ವಿಷಯದಕುರಿತು ಸಂಶೋಧನೆ ಕೈಗೊಂಡು ಮಹಾಪ್ರಬಂದವನ್ನು ಮಂಡಿಸಿದ್ದರು. ಕ.ವಿ.ವಿ ಧಾರವಾಡ ಅರ್ಥಶಾಸ್ತ್ರ ವಿಭಾಗದ ಡಾ. ಎನ್.ಎಸ್.ಮೂಗದೂರ ಮಾರ್ಗದರ್ಶನ ನೀಡಿರುತ್ತಾರೆ. ಉಪಸಬಾಪತಿಗಳು ವಿಧಾನಸೌಧ ಬೆಂಗಳೂರು ಕರ್ನಾಟಕ ಸರ್ಕಾರ ಹಾಗೂ ಚೇರಮನರಾದ ರುದ್ರ್ಪ ಮಾನಪ್ಪ ಲಮಾಣಿ ಹಾಗೂ ಆಡಳಿತಾಧಿಕಾರಿಗಳಾದ ಡಾ:ಆರ್.ಎಮ್.ಕುಬೇರ್ಪ ಮತ್ತು ಪ್ರಾಶುಂಪಾಲರು, ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ