ಅಥಣಿ

ರಮೇಶ್ ಜಾರಕಿಹೊಳಿ ಭೇಟಿಯಾದ ಅಥಣಿ ಜಿ.ಪಂ ಸದಸ್ಯ.

ರಮೇಶ್ ಜಾರಕಿಹೊಳಿ ಭೇಟಿಯಾದ ಅಥಣಿ ಜಿ.ಪಂ ಸದಸ್ಯ.
ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಅಥಣಿ ಮುಖಂಡರು

ಅಥಣಿ 17: ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಪ್ಪಾ ಮುದಕಣ್ಣವರ ಜೊತೆಯಾಗಿ ಅಥಣಿಯ ಜಾರಕಿಹೊಳಿ ಬೆಂಬಲಿಗರು ರಮೇಶ್ ಅವರನ್ನು ಭೇಟಿ ಮಾಡಿ ಮಾತನಾಡಿದರು.

ಸಿಡಿ ಪ್ರಕರಣದಲ್ಲಿ ನೊಂದಿರುವ ಜಾರಕಿಹೊಳಿ ಅವರನ್ನು ಬೆಂಬಲಿಗರಾದ, ಬಸವರಾಜ ಯಡೂರ, ರಾಮು ಹಳಿಂಗಳಿ, ರಾಘವೇಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಪ್ಪಾ ಮುದಕಣ್ಣವರ ಜಾರಕಿಹೊಳಿ ಬೆಂಗಳೂರು ನಿವಾಸದಲ್ಲಿ ಭೇಟಿ ಮಾಡಿ ನಿಮ್ಮ ಜೊತೆ ನಾವು ಹಾಗೂ ಅಥಣಿ ಜನತೆ ಇದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಿದರು.

ಬೆಂಬಲಿಗರೊಂದಿಗೆ ರಮೇಶ್ ಜಾರಕಿಹೊಳಿ ಮಾತನಾಡಿ, ಸಿಡಿ ಪ್ರಕರಣದಿಂದ ನಾವು ಆದಷ್ಟು ಬೇಗನೆ ಮುಕ್ತರಾಗಿ ಮತ್ತೆ ಸಮಾಜ ಹಾಗೂ ಅಥಣಿ ಭಾಗದ ಹಲವಾರು ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸುತ್ತೆನೆಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಕಷ್ಟ ಕಾಲದಲ್ಲಿ ಅಥಣಿ ಜನತೆ ನನ್ನ ಪರವಾಗಿ ನಿಂತಿದ್ದಕ್ಕೆ ಧÀನ್ಯವಾದಗಳನ್ನು ಸಲ್ಲಿಸಿದರು ಎಂದು ಬಸವರಾಜ ಯಡೂರ ಮಾಹಿತಿ ನೀಡಿದರು.

ಸುದ್ದಿ ಓದಿ