ಅಥಣಿ

ಅಗ್ರಾಣಿ ಹಳ್ಳ ಮತ್ತು ವ್ಯವಸಾಯ ಜಮೀನಿನ ಮಣ್ಣು ಇಟ್ಟಿಗೆ ಭಟ್ಟಿ ಪಾಲು

ಅಗ್ರಾಣಿ ಹಳ್ಳ ಮತ್ತು ವ್ಯವಸಾಯ ಜಮೀನಿನ ಮಣ್ಣು ಇಟ್ಟಿಗೆ ಭಟ್ಟಿ ಪಾಲು
ಅಗ್ರಾಣಿ ಹಳ್ಳದ ಪಕ್ಕದ ಜಮೀನಿನಲ್ಲಿ ಅಕ್ರಮ ಮಣ್ಣುಗಣಿಗಾರಿಕೆ ಮಾಡುತ್ತಿರುವ ದೃಶ್ಯ

ಅಥಣಿಯಲ್ಲಿ ಹಾಡುಹಗಲೇ ಮಣ್ಣುಲೂಟಿ ಽ ಕಂಡು ಕಾಣದಂತೆ ಕುಳಿತ ಅಧಿಕಾರಿಗಳು 

ಅಥಣಿ 31:  ಅಥಣಿ ತಾಲೂಕಿನ ಕ್ರಷ್ಣಾ ನದಿ ತೀರ, ಅಗ್ರಾಣಿ ಹಳ್ಳದ ತೀರ ಹಾಗೂ ತೀರದ ಗ್ರಾಮಗಳಲ್ಲಿ ಅಕ್ರಮ ಮಣ್ಣುಗಾರಿಕೆ ಮಿತಿಮೀರಿದ್ದು, ಜಿಲ್ಲಾಡಳಿತ, ತಾಲೂಕಾಡಳಿತ, ಪೋಲಿಸ ಇಲಾಖೆ, ಭೂಗರ್ಭ ಇಲಾಖೆ ಅಕ್ರಮಕ್ಕೆ ಕಡಿವಾಣ ಹಾಕದಿರುವುದರಿಂದ ಅಕ್ರಮ ಮರುಳು ದಂಧೆಗೆ ಕಡಿವಾಣ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡತೊಡಗಿದೆ, ಈ ದಂಧೆಗೆ ಬ್ರೇಕ್ ಹಾಕಬೇಕಾದ ಅಧಿಕಾರಿಗಳೇ ಸುಮ್ಮನಿದ್ದು ಲೂಟಿ ಮಾಡಲು ಬಿಟ್ಟಿದ್ದು ನೋಡಿದರೇ ಇವರೇ ಇಂತಹ ಅಕ್ರಮ ದಂದೆಕೋರರಿಗೆ ನೆರವಾಗಿದ್ದಾರಾ ಎನ್ನುವ ಸಂಶಯ ಸಾರ್ವಜನಿಕರಿಗೆ? ವಿಶೇಷ ಎಂದರೆ ಮಣ್ಣು ತುಂಬಿದ ಪ್ರತಿ ವಾಹನ ಪೋಲಿಸ್ ಠಾಣೆಯ ಮುಂದೆಯೇ ಹೋಗುತ್ತಿದ್ದರೂ ಕೂಡ ಇಲಾಖೆಯವರು ಸುಮ್ಮನಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ,  

ಹೊಲದಿಂದಲೂ ಮಣ್ಣು ತಗೆದರೂ ಸಹ ಅದನ್ನ ಹೊಲಗಳಿಗೆ ಮಾತ್ರ ಬಳಸಬೇಕು ಅದನ್ನ ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆಗೆ ಮಾರಾಟ ಮಾಡಬಾರದೆಂದು ಭೂ ಮತ್ತು ಗಣಿ ವಿಜ್ಞಾನದ ಕಾನೂನಿನಲ್ಲಿದೆ, ಕೋವಿಡ 19 ಬಂದಿರುವುದರಿಂದ ಅವರಿಗೆ ಮಣ್ಣು ಗಣಿಗಾರಿಕೆ ಮಾಡಲೂ ಸಾಕಷ್ಟು ಅನುಕೂಲವಾಗಿದೆ ಎಂದರೂ ತಪ್ಪಾಗಲಾರದು, ಯಾವುದೇ ಪೋಲಿಸರು ಅವರನ್ನ ತಡೆಯುವುದಿಲ್ಲಾ ಎಲ್ಲಾ ಅಧಿಕಾರಿಗಳ ಬೇರೆ ಕೆಲಸದಲ್ಲಿ ಭಾಗಿಯಾಗಿರುತ್ತಾರೆ ಅಕ್ರಮವನ್ನ ತಡೆಯಲು ಯಾರೂ ಮುಂದಾಗುವುದಿಲ್ಲಾ ಎನ್ನುವ ಅನುಕೂಲತೆಯನ್ನ ಯೋಚಿಸಿ ಸಾಕಷ್ಟು ಅಕ್ರಮ ಮಣ್ಣುಗಣಿಗಾರಿಕೆಗೆ ತೊಡಗಿದ್ದಾರೆ. 

ನದಿ, ಹಳ್ಳದ ತಟದಲ್ಲಿ ಅಟ್ಟಹಾಸದಿಂದ ನೀರು ಹರಿಯುವ ದಿಕ್ಕಿನ ಬದಲಾವಣೆ ! 

ತಾಲೂಕಿನಲ್ಲಿ ಹರಿದಿರುವ ಕೃಷ್ಣಾನದಿ ಹಾಗೂ ಅಗ್ರಾಣಿ ಹಳ್ಳವು ಬತ್ತುತ್ತಿದ್ದನ್ನು ಅವಕಾಶವನ್ನಾಗಿ ಬಳಸಿಕೊಂಡು ಸುತ್ತಮುತ್ತಲಿಮ ಫಲವತ್ತಾದ ಮಣ್ಣನ್ನು ಬಗೆದು ಟಿಪ್ಪರುಗಳ ಮೂಲಕ ತಾಲೂಕಿನ ವಿವಿಧ ಕಡೆ ಇಟ್ಟಂಗಿ ತಯಾರಿಕೆಗೆ ಒದಗಿಸಲಾಗುತ್ತಿದ್ದರಿಂದ ಕ್ರಷ್ಣಾನದಿ, ಅಗ್ರಾಣಿ ಹಳ್ಳ ಮೂಕವಾಗಿದೆ ಈ ಕಾರ್ಯ ಹೀಗೆ ಮುಂದುವರೆದರೆ ಮಣ್ಣು ತೆಗೆದಿರುವ ಪ್ರದೇಶದಲ್ಲಿ ತಗ್ಗು ಬಿದ್ದು ಆ ಪ್ರದೇಶದಲ್ಲಿ ನೀರು ಸಂಗ್ರಹವಾಗಿ ನದಿಗೆ ಮಹಾಪೂರ ಬಂದಾಗ ಅಲ್ಲಿನ ನೀರು ಸಮೀಪದ ಗ್ರಾಮಗಳಿಗೆ ನುಗ್ಗುತ್ತದೆ ಹಾಗೂ ತಗ್ಗಾದ ಪ್ರದೇಶಕ್ಕೆ ನೀರು ಹರಿಯುವುದರಿಂದ ನದಿಯ ನೀರಿನ ಹರಿವಿನ ದಿಕ್ಕು ಕೂಡ ಬದಲಾಗುತ್ತದೆ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. 

ಎಲ್ಲೆಲ್ಲಿ ಮಣ್ಣಿನ ದಂಧೆ- ಅಥಣಿ ತಾಲೂಕಿನ ಅವರಖೋಡ, ಹಲ್ಯಾಳ, ದರೂರ, ಹುಲಗಬಾಳಿ, ಸಪ್ತಸಾಗರ, ತೀರ್ಥ, ಶಿವನೂರ, ದೊಡವಾಡ, ಮೊಳವಾಡ ಸೇರಿ ವಿವಿಧೆಡೆ ಕ್ರಷ್ಣೆ ಹಾಗೂ ಅಗ್ರಾಣಿ ಒಡಲಿನ ಮಸರಗುಪ್ಪಿ, ಶಿವನೂರ ಗ್ರಾಮಗಳಿಂದ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಎತ್ತಿ ರಾತ್ರಿ ವೇಳೆ ವಾಹನಗಳ ಮೂಲಕ ಹೊಲಗಳಿಗೆಂದು ಹೇಳಿ ಇಟ್ಟಂಗಿ ಭಟ್ಟಿಗಳಿಗೆ ಸಾಗಿಸಲಾಗುತ್ತಿದೆ. ಈ ಅಕ್ರಮ ಕಂಡೂ ಕಾಣದಂತೆ ತಾಲೂಕಾಡಳಿತ ವರ್ತಿಸುತ್ತಿರುವುದು ಮಾತ್ರ ಸೋಜಿಗವಾಗಿದೆ. 

ಪರವಾನಿಗೆ ಇಲ್ಲ- ತಾಲೂಕಾಡಾಳಿತ ಮಣ್ಣು ತೆಗೆದು ವಾಣಿಜ್ಯೊದ್ಯಮಕ್ಕೆ ಬಳಸುವುದಕ್ಕೆ ಪರವಾನಿಗೆ ನೀಡಲು ಬರುವುದಿಲ್ಲ ಎನ್ನುತ್ತಿದ್ದರೂ ಹಗಲು-ರಾತ್ರಿ ಎನ್ನದೆ ಮಣ್ಣಿನ ಸಾಗಾಣಿಕೆ ನಿರಂತರವಾಗಿ ಸಾಗಿದೆ. ಇದರ ಪರಿಣಾಮವಾಗಿ ಕೆಲವು ಕಡೆ ಹತ್ತಾರು ಅಡಿಗಳಷ್ಟು ಕಂದಕಗಳು ಸ್ರಷ್ಟಿಯಾಗಿದ್ದು ಅಲ್ಲಲ್ಲಿ ಗುಂಡಿಗೆ ಜನ-ಜಾನುವಾರುಗಳು ಬೀಳುತ್ತಿರುವ ಪ್ರಸಂಗಗಳು ಜರುಗುತ್ತಿವೆ. 

ಮೌನಕ್ಕೆ ಜಾರಿದ ಅಧಿಕಾರಿಗಳು- 

ಹತ್ತಾರು ಅಡಿಗಳಷ್ಟು ನದಿ-ಹಳ್ಳದ ಜಾಗವನ್ನು ಪಕ್ಕದ ಕೆಲ ಜಮೀನಿನ ಮಾಲೀಕರು ಅಕ್ರಮ ಮಣ್ಣಿನ ಸಾಗಣೆಗೆ ಬಳಸಿಕೊಂಡು ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ, ಇದೆಲ್ಲ ಗೊತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಈ ನಿಟ್ಟಿನಲ್ಲಿ ಸೂಕ್ತಕ್ರಮ ಜರುಗಿಸಿ ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಬೇಕೆಂದು ಒಕ್ಕೂರಲಿನ ಅಭಿಪ್ರಾಯವಾಗಿದೆ, ಈ ಘಟನೆ ಕುರಿತು ಹೇಳಿಕೆ ಪಡೆಯಲು ಗಣಿ ಭೂ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದಿಸುತ್ತಿಲ್ಲ. 

ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿರುವುದು ಕಾನೂನಿನ ಪ್ರಕಾರ ಅಪರಾಧ ಅದೂ ಕೃಷಿ ಜಮೀನು ಆಗಲಿ ಇಲ್ಲವೇ ಬೇರೆ ಆಗಲಿ ಯಾರೇ ಆ ಕೃತ್ಯದಲ್ಲಿ ತೊಡಗಿದ್ದರೂ ಸರಿ ಅವರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸುತ್ತೆನೆ

-ದುಂಡಪ್ಪಾ ಕೋಮಾರ(ತಹಶಿಲ್ದಾರರು,ಅಥಣಿ) 

ಈ ಅಕ್ರಮ ಮಣ್ಣು ಲೂಟಿಮಾಡುವವರು ಪೋಲಿಸ್ ಠಾಣೆ ಮುಂದೆಯೇ ಹಾದುಹೋಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಏಕೆ ? ತಹಶಿಲ್ದಾರ ಅವರಿಗೆ ಕೇಳಿದರೆ ಪೋಲಿಸರ ಮೇಲೆ, ಪೋಲಿಸರನ್ನು ಕೇಳಿದರೆ ತಹಶಿಲ್ದಾರರ ಮೇಲೆ ಹಾಕುತ್ತಿದ್ದು ಯಾರೂ ಕೂಡ ಇವರನ್ನು ನಿಯಂತ್ರಿಸುತ್ತಿಲ್ಲ

- ಅನೀಲ ನರೋಡೆ(ಸಾರ್ವಜನಿಕರು, ಅಥಣಿ). 


ಪೊಟೊ ಶೀರ್ಷಿಕೆ- (31ಅಥಣಿ-01). 


ಸುದ್ದಿ ಓದಿ