ಕಾಗವಾಡ

ಅಥಣಿ ಶುಗರ್ಸಗೆ ಶ್ರೇಷ್ಠ ಕೈಗಾರಿಕಾ ಪ್ರಶಸಿ ಪ್ರದಾನ

ಅಥಣಿ ಶುಗರ್ಸಗೆ ಶ್ರೇಷ್ಠ ಕೈಗಾರಿಕಾ ಪ್ರಶಸಿ ಪ್ರದಾನ

ಶೇಡಬಾಳ 29: ಇತ್ತಿಚಿಗೆ ಪಣಜಿಯಲ್ಲಿ ದಿ. ಶುಗರ್ ಟೆಕ್ನಾಲಜಿ ಅಸೋಶಿಯೆಶನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತರಾಷ್ಟ್ರೀಯ ಸಕ್ಕರೆ ಎಕ್ಸಪೋದಲ್ಲಿ ಕೆಂಪವಾಡದ ಅಥಣಿ ಶುಗಸರ್್ ಲಿಮಿಟೆಡ್ಗೆ ಶ್ರೇಷ್ಠ ಕೈಗಾರಿಕಾ ಪ್ರಶಸಿ ಲಭಿಸಿದ್ದು, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ ಅವರು ಕಾರ್ಖಾನೆಯ ಎಂಡಿ ಶ್ರೀನಿವಾಸ ಪಾಟೀಲವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೋವಾ ರಾಜ್ಯದ ಪಣಜಿಯಲ್ಲಿ ದಿ. ಶುಗರ್ ಟೆಕ್ನಾಲಜಿ ಅಸೋಶಿಯೆಶನ್ ಆಫ್ ಇಂಡಿಯಾ ಅವರು ಆಯೋಜಿಸಿದ 80 ನೇ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಸಕ್ಕರೆ ಎಕ್ಸ್ಪೋ 2022 ರ ಉದ್ಘಾಟನೆಯ ಸಮಾರಂಭದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ ಅವರು ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ರಾಜ್ಯ, ದೇಶ, ಹಾಗೂ ವಿದೇಶಗಳ ಕೈಗಾರಿಕಾ ಸಂಸ್ಥೆಗಳಿಗೆ ಆಯೋಜಿಸಿದ ಪ್ರಶಸ್ತಿ  ಪ್ರದಾನ ಸಮಾರಂಭದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಶ್ರೀಮಂತ ಪಾಟೀಲ ಅವರು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹಾಗೂ ಭಾರತ ಸಕರ್ಾರದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಇವರಿಂದ ಸ್ವೀಕರಿಸಿದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಪಾಟೀಲ ಅವರು ಈ ಪ್ರಶಸ್ತಿ ಲಭಿಸಿದ್ದು, ಸಂತೋಷದ ವಿಷಯ. ಗೋವಾದ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಚಿವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ನಮ್ಮ ಸೌಭಾಗ್ಯ, ನಾನು ಪ್ರಶಸ್ತಿ ನೀಡಿದ ಎಲ್ಲರಿಗೂ ಹಾಗೂ ಈ ಪ್ರಶಸ್ತಿ ಬರಲು ಕಾರಣಿಕರ್ತರಾದ ನಮ್ಮ ಕಾರ್ಖಾನೆಯ ಎಲ್ಲ ಆಡಳಿತ ಮಂಡಳಿಯವರಿಗೆ, ಎಲ್ಲಾ ವಿಭಾಗದ ಅಧಿಕಾರಿ ವರ್ಗದವರಿಗೆ, ಕಾಮರ್ಿಕ ಬಂಧುಗಳಿಗೆ ಮತ್ತು ರೈತ ಬಾಂಧವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಈ ಸಮಯದಲ್ಲಿ ಎಸ್.ಟಿ.ಎ.ಐ. ಸಕ್ಕರೆ ತಂತ್ರಜ್ಞಾನದ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸಂಜಯ್ ಅವಸ್ಥಿ, ನಿರ್ದೇಶಕರಾದ ಎನ್.ಎಸ್.ಐ. ನರೇಂದ್ರ ಮೋಹನ್ ಹಾಗೂ ಶುಗರ್ ಇಂಡಸ್ಟ್ರೀಸ್ ವಲಯದ ಎಲ್ಲಾ ಗಣ್ಯರು, ಹಲವು ರಾಜ್ಯಗಳ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಲವಾರು ತಂತ್ರಜ್ಞರು ಸೇರಿದಂತೆ ಅನೇಕರು ಉಪಸ್ಥಿರಿದ್ದರು

ಸುದ್ದಿ ಓದಿ