ದೇವಸೇನ ಮುನಿಮಹಾರಾಜರ ಅಸ್ಥಿವಿಸರ್ಜಣೆ
ಶೇಡಬಾಳ 26: ಶೇಡಬಾಳ ಗ್ರಾಮದ ಶಾಂತಿಸಾಗರ ಆಶ್ರಮದಲ್ಲಿ ಶುಕ್ರವಾರ ದಿ. 24 ರಂದು ಯಮಸಲ್ಲೇಖನ ವೃತ ಪೂರ್ವಕವಾಗಿ ಸಮಾಧಿ ಮರಣ ಸಾಧಿಸಿದ ಶಾಂತಮೂರ್ತಿ ಆಚಾರ್ಯ ದೇವಸೇನ ಮುನಿಮಹಾರಾಜರ ಅಸ್ಥಿವಿಸರ್ಜಣೆ ಕಾರ್ಯಕ್ರಮ ರವಿವಾರ ದಿ. 26 ರಂದು ಮುಂಜಾನೆ 8 ಗಂಟೆಗೆ ಭಟ್ಟಾರಕರು, ಮುನಿಗಳು, ಮಾತಾಜಿಯವರು ಹಾಗೂ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿಭಾವದಿಂದ ಜರುಗಿತು.
ನಾಂದಣಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ, ಆಚಾರ್ಯರ ಉತ್ತರಾಧಿಕಾರಿ ಶಾಂತಿಸೇನ ಮುನಿಮಹಾರಾಜ. ಮಾತಾಜಿಯವರ ಮಾರ್ಗದರ್ಶನದಲ್ಲಿ ಪ್ರತಿಷ್ಟಾಚಾರ್ಯ ಆನಂದ ಉಪಾಧ್ಯೆಯವರು ಅಸ್ಥಿವಿಸರ್ಜಣೆ ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅಸ್ಥಿವಿಸರ್ಜಣೆ ಪೂರ್ವದಲ್ಲಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ, ಆಚಾರ್ಯರ ಉತ್ತರಾಧಿಕಾರಿ ಶಾಂತಿಸೇನ ಮುನಿಮಹಾರಾಜ. ಮಾತಾಜಿಯವರಿಂದ ಮಂತ್ರಪಠಣ ಕಾರ್ಯಕ್ರಮಗಳು ಜರುಗಿದವು.
ಆಶ್ರಮದ ಸಂಚಾಲಕ ರಾಜು ನಾಂದ್ರೆ, ಅಜೀತ ಕುಚನೂರೆ, ಸಂಜಯ ಗೋದಾ, ಪಂಕಜ ಕೋಟಾಡಿಯಾ, ಸುದರ್ಶನ ದೋಟಿಯಾ, ಪಾರಿಸ ಉಗಾರೆ, ಸುಕುಮಾರ ಪಾಟೀಲ, ಸುಭಾಶ ಶಿರಗಾವೆ, ಮಹಾಬಲ ಪಡಸಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.