ಹಳೆ ವಿದ್ಯಾರ್ಥಿಗಳ ಸಂಘದ ಸಮಾವೇಶ
ಕಾಗವಾಡ 27: ಯಾವುದೇ ಸಂಸ್ಥೆ ಉನ್ನತ ಸ್ಥಿತಿಯಲ್ಲಿ ಹಾಗೂ ಪ್ರಗತಿ ಪಥದ ದಾರಿಯಲ್ಲಿದೆ ಎಂದರೆ, ಅದರ ಹಳೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನಂತರ ಪ್ರಸ್ತುತ ಜೀವನ ರೂಪಿಸುವಲ್ಲಿ ಯಶಸ್ವಿಯಾಗಿರುವುದು ಕಾರಣವಾಗಿರುತ್ತದೆ. ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್ನ ಶಿವಾನಂದ ಮಹಾವಿದ್ಯಾಲಯ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳನ್ನು ರಾಷ್ಟ್ರ, ಅಂತರ್ ರಾಷ್ಟ್ರದ ಮಟ್ಟದ ವರೆಗೆ ಸಂಸ್ಕರಿಸುವ ಜವಾಬ್ದಾರಿ ಹೊಂದಿದೆ ಎಂದು ಕಾಗವಾಡ ಗುರುದೇವಾಶ್ರಮ ಪ.ಪೂ. ಯತೀಶ್ವರಾನಂದ ಸ್ವಾಮೀಜಿ ಹೇಳಿದರು.
ಶಿವಾನಂದ ಮಹಾವಿದ್ಯಾಲಯ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಸಮಾಜದಲ್ಲಿ ತಮ್ಮದೇ ಆದ ರಚನಾತ್ಮಕ ಕಾರ್ಯ ನಿರ್ವಹಿಸುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿ ಹೇಳಿದರು. ಮಹಾವಿದ್ಯಾಲಯದ ಪ್ರಸ್ತುತ ಪ್ರಗತಿಯ ಸವಿಸ್ತಾರ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಬಗ್ಗೆ ಅರಿವು ಹಾಗೂ ಜವಾಬ್ದಾರಿಯ ಬಗ್ಗೆ ತಿಳಿಹೇಳಿದರು.
ನ್ಯಾಕ್ ಮಾನ್ಯತೆಯು ಸಂಸ್ಥೆಯ ಗುಣಮಟ್ಟ ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯದ ಬಗ್ಗೆ ಹೆಚ್ಚು ಒತ್ತು ನೀಡಿ ಹಳೆ ವಿದ್ಯಾರ್ಥಿಗಳ ಪ್ರಸ್ತುತ ಪ್ರಗತಿಯ ಬಗ್ಗೆ ತಿಳಿದುಕೊಳ್ಳುವ ಹಾಗೂ ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ನಿವೃತ್ತ ಉಪ ಪ್ರಾಚಾರ್ಯ ಪ್ರೊ.ಎಸ್.ಎಸ್.ಬಾಗನೆ ಹೇಳಿದರು. ಅವರು ಹಳೆ ವಿದ್ಯಾರ್ಥಿಗಳಲ್ಲಿ ಈಗಾಗಲೇ ಸಾಧನೆಗೈದ ಉನ್ನತ ಹುದ್ದೆಯಲ್ಲಿರುವ ತಹಶೀಲ್ದಾರರು, ಪೋಲಿಸ ಇಲಾಖಾ ಅಧಿಕಾರಿಗಳು ಪ್ರಾಚಾರ್ಯರು, ಪ್ರಾಧ್ಯಾಪಕರು, ಕಂದಾಯ ಮತ್ತು ಇತರೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಬಗ್ಗೆ ಪರಿಚಯಿಸಿದರು.ಪ್ರಾಚಾರ್ಯ ಪ್ರೊ.ಬಿ.ಎ.ಪಾಟೀಲ, ಉಪಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಹಾಗೂ ಮೇಜರ್ ವ್ಹಿ.ಎಸ್.ತುಗಶೆಟ್ಟಿ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರೊ. ಜೆ.ಕೆ.ಪಾಟೀಲ ಸ್ವಾಗತಿಸಿದರು. ಪ್ರೊ. ಅಶೋಕ ಪಾಟೀಲ ವಂದಿಸಿದರು. ಸೋನಾಲಿ ಫಡತರೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಪ್ರೊ. ವಿ.ಬಿ.ಬುರ್ಲೆ, ಡಾ. ಎಸ್.ಪಿ.ತಳವಾರ, ಪ್ರೊ. ಐ.ಎಸ್.ಜಮಾದಾರ, ಪ್ರೊ. ಎಸ್.ಐ.ಇನಾಮದಾರ, ಪ್ರೊ. ಮಿಸ್. ವಿ.ವಿ.ಪಾಟೀಲ. ಪ್ರೊ. ಮಿಸ್. ಪಿ.ವಿ.ಕಿನಂಗೆ, ಪ್ರೊ. ಮಿಸ್. ಎಂ.ಕೆ.ಪತ್ತಾರ, ಪ್ರೊ. ಮಿಸ್. ಎಸ್.ಆರ್.ದುಬಳೆ, ಪ್ರೊ. ಎಸ್.ಬಿ.ಅಲಗೌಡರ, ಸೇರಿದಂತೆ ಸಿಬ್ಬಂದಿದವರು ಉಪಸ್ಥಿತರಿದ್ದರು.ಕಾಗವಾಡ 6 ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಯತೀಶ್ವರಾನಂದ ಸ್ವಾಮೀಜಿ, ಹಾಗೂ ಮತ್ತಿತರರು.