ಆರೋಗ್ಯ ಮತ್ತು ಪ್ರೋಟಿನ್ ಹೆಚ್ಚಿಸಿಕೊಳ್ಳುವ ಮಾಹಿತಿ ಕಾರ್ಯಾಗಾರ..!
ಮಿರಜ್ನ ಅರಿನ್ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಆಷಾಢ ಏಕಾದಶಿ ಆಚರಣೆ
ಕಾಗವಾಡ 18: ಮಹಾರಾಷ್ಟ್ರದ ಮಿರಜ್ ಪಟ್ಟಣದ ಪ್ರಖ್ಯಾತ ಅರಿನ್ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಬುಧವಾರ ದಿ. 17 ರಂದು ಆಷಾಢ ಏಕಾದಶಿಯನ್ನು ಆಚರಣೆ ಮಾಡಿ, ಆರೋಗ್ಯ ಮತ್ತು ಪ್ರೋಟಿನ್ ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.
ಆಸ್ಪತ್ರೆಯ ವೈದ್ಯ ಡಾ. ದೀಪಾಲಿ ಜಾಧವ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸೇರಿ ವಿಠ್ಠಲ-ರುಕ್ಮೀಣಿ ಮೂರ್ತಿಗಳ ಪೂಜೆ ನೆರವೇರಿಸಿದರು. ಬಳಿಕ ಡಾ. ದೀಪಾಲಿ ಜಾಧವ ಮಾತನಾಡಿ, ನಮ್ಮ ದೇಶದ ವಿವಿಧ ಧಾರ್ಮಿಕ ಆಚರಣೆಗಳು ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ ಕುರಿತು ಮಾಹಿತಿ ನೀಡುತ್ತಾ, ನಮ್ಮ ಪೂರ್ವಜರು ಪ್ರತಿಯೊಂದು ಹಬ್ಬಗಳನ್ನು ವೈಜ್ಞಾನಿಕವಾಗಿ ಆಚರಿಸಿಕೊಂಡು ಬಂದಿದ್ದು, ಬಹಳಷ್ಟು ಹಬ್ಬ-ಹರಿದಿನಗಳ ಆಚರಣೆಯಿಂದಾಗಿ ಸಮತೋಲನ ಆಹಾರ ನಮ್ಮ ದೇಹಕ್ಕೆ ನೀಡಿದಂತಾಗುತ್ತದೆ. ಇದಲ್ಲದೇ ನಮ್ಮ ದೇಹದಲ್ಲಿ ಯಾವ ರೀತಿಯಾಗಿ ನ್ಯೂಟ್ರಿಶನ್ ಹೆಚ್ಚಿಸಿಕೊಂಡು ಆರೋಗ್ಯವಂತರಾಗಿ ಇರಬೇಕೆಂದು ಮಾಹಿತಿ ನೀಡಿದರು.
ಈ ಸಮಯದಲ್ಲಿ ಡಾ. ದೀಪಾಲಿ ಜಾಧವ ಸೇರಿದಂತೆ ಆಸ್ಪತ್ರೆಯ ಇತರೇ ವೈದ್ಯರು, ಸಿಬ್ಬಂದಿ ವರ್ಗದವರು ಮತ್ತು ರೋಗಿಗಳು ಉಪಸ್ಥಿತರಿದ್ದರು.