ರಾಣೆಬೆನ್ನೂರಲ್ಲಿ ಆಶಾಡ ಮಾಸಾ ಇಷ್ಟಲಿಂಗ ಮಹಾಪೂಜೆ ಆರಂಭ
ರಾಣೇಬೆನ್ನೂರು : ಜು 21 ಅಂದಿನ ಐತಿಹಾಸಿಕ ಹಿನ್ನೆಲೆಯುಳ್ಳ ರಾಣಿಬಿದನೂರು, ಇಂದಿನ ವಾಣಿಜ್ಯ ನಗರವು, ದಾನ ಧರ್ಮ ಸಂಸ್ಕೃತಿ ಸಂಸ್ಕಾರ, ಆಚಾರ ವಿಚಾರ ಮತ್ತು ಧರ್ಮ ಜಾಗೃತಿಗೆ ಸದಾಕಾಲ ಮುನ್ನುಡಿ ಬರೆಯುವ ಪುಣ್ಯವಂತರ ನಾಡು ಇದಾಗಿದೆ ಎಂದು ಉಜ್ಜಯಿನಿ ಮಹಾ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು. ಅವರು, ಶುಕ್ರವಾರ ರಾತ್ರಿ ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠ ಶ್ರೀ ಜಗದ್ಗುರು ವಾಗೀಶ ಪಂಡಿತಾರಾದ್ಯ ಸಮುದಾಯ ಭವನದಲ್ಲಿ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜನ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪಂಚಪೀಠಗಳಿಗೆ ತವರೂರು ಈ ಪುಣ್ಯಭೂಮಿ. ವಾಗೀಶ ಪಂಡಿತಾರಾಧ್ಯರು, ಪ್ರಸ್ತುತ ಉಜ್ಜಯಿನಿ ಜಗದ್ಗುರುಗಳು ಮತ್ತು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರಿಗೆ ಜನ್ಮ ನೀಡಿದ ಪಾವನ ಕ್ಷೇತ್ರ ಇದಾಗಿದೆ ಎಂದ ಜಗದ್ಗುರುಗಳು ಪಂಚ ಆಚಾರ್ಯರು, ತವರೂರಿಗೆ ಆಗಮಿಸಲು ತುಂಬಾ ಅಭಿಮಾನ ಮತ್ತು ಸಂತೋಷದಿಂದ ದಯಮಾಡಿ ಸುವಂಥವರಾಗಿದ್ದಾರೆ ಎಂದರು.
ಕೆಲವು ಬುದ್ಧಿಜೀವಿಗಳು, ವೈಚಾರಿಕ ವಿಚಾರವಂತರು, ಆಚಾರ ವಿಚಾರವಿಲ್ಲದೆ ವೀರಶೈವ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಪಂಚಾಚಾರ್ಯರು ಕಲ್ಲಿನಿಂದ ಹೇಗೆ ಉಗಮವಾಗಲು ಸಾಧ್ಯವೆಂದು ಪ್ರಶ್ನಿಸುತ್ತಿದ್ದಾರೆ?.ಆದರೆ ಹರಿ ಉದಯಿಸಿದ್ದನ್ನು ನಂಬುವುದಾದರೇ, ಪಂಚಾಚಾರ್ಯರ ಉದಯದ ಬಗ್ಗೆ ಪ್ರಶ್ನಿಸಬಹುದು ಎಷ್ಟರಮಟ್ಟಿಗೆ ಸರಿ!. ಎಂದು ಪ್ರಶ್ನಿಸಿದ ಜಗದ್ಗುರುಗಳು ಟಿಕೆ ಟಿಪ್ಪಣಿಗಳಿಗೆ ಉತ್ತರಿಸುವ ಗೋಜಿಗೆ ಹೋಗದೆ, ವೀರಶೈವ ಲಿಂಗಾಯತರು ಒಂದಾಗಿ, ಶಿಕ್ಷಣದಲ್ಲಿ ಮುಂದಾಗಿ, ರಾಜಕೀಯ ಸಮಾನತೆ ಪಡೆದು, ಬಲಿಷ್ಠ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತ ಧರ್ಮವು ಸನಾತನವಾದುದು, ಅದಕ್ಕೆ ಯುಗ ಯುಗಗಳ ಇತಿಹಾಸವಿದೆ. ಪರ್ಪ ಮತ್ತು ಸಿಂಧೂ ನಾಗರಿಕತೆಯ ಬಗ್ಗೆ ಸಂಶೋಧನೆ ನಡೆದಾಗ ವೀರಶೈವ ಧರ್ಮದ ಅನೇಕ ಕುರುಹುಗಳು ಲಭಿಸಿವೆ. ಸಾವಿರಾರು ಶವಗಳ ಕೊರಳಲ್ಲಿ ಲಿಂಗವಿದ್ದು, ಕುಳ್ಳಿರಿಸಿ ಅಂತ್ಯಕ್ರಿಯೆ ಮಾಡಿದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ. ಎಂದು ವಿವರಿಸಿ ಮಾತನಾಡಿದರು. ಆರಂಭದ ದಿನದಂದು ನಾಂದಿ ನುಡಿಯಾಡಿದ ರಟ್ಟಿಹಳ್ಳಿ ಕಬ್ಬಿಣ ಕಂಠಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರು, ವೀರಶೈವ ಲಿಂಗಾಯತ ಧರ್ಮದಲ್ಲಿ ಯಾವುದೇ ಜಾತಿ ಮತ ಭೇದ ಭಾವವಿಲ್ಲ.ಮಾನವ ಧರ್ಮದ ಸಾಂಸ್ಕೃತಿಯೇ ನಮ್ಮ ಮೂಲ ಧರ್ಮವಾಗಿದೆ. ವೈಚಾರಿಕ ವಿವೇಚನೆ ಬಿಟ್ಟು, ಆಚಾರ ವಿಚಾರಗಳನ್ನು ಇಟ್ಟುಕೊಂಡು, ಲಿಂಗವನ್ನು ಕಟ್ಟಿಕೊಂಡು ನಮ್ಮ ಧರ್ಮದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದರು.
ದೊಡ್ಡಪೇಟೆ ಆವರಗೊಳ್ಳ ಪುರವರ್ಗ ಹಿರೇ ಮಠದ ಶ್ರೀ ಓಂಕಾರ ಶಿವಾಚಾರ್ಯರು, ಧರ್ಮ ಜಾಗೃತಿಯ ಸಂದೇಶಾಮೃತ ನೀಡಿದರು ಇದೇ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ದಾನ ಸೇವೆ ನೀಡಿದ ಅನೇಕ ಗಣ್ಯರನ್ನು, ಜಗದ್ಗುರುಗಳ ಗುರು ರಕ್ಷಣೆ ನೀಡಿ, ಸನ್ಮಾನಿಸಿದರು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ, ಹಾಲೇಶಪ್ಪ ಗೌಳಿ, ಸುಜ್ಞಾನಮೂರ್ತಿ ಹಿರೇಮಠ, ವಾಗೀಶಸ್ವಾಮಿ ಮಳಿ ಮಠ, ಸುಮಂಗಲಾ ಪಾಟೀಲ್, ಸುನಂದಮ್ಮ ತಿಳುವಳ್ಳಿ, ರಾಜಣ್ಣ ತಿಳುವಳ್ಳಿ, ಅಮೃತಗೌಡ ಪಾಟೀಲ್, ಬಿದ್ದಾಡಪ್ಪ ಚಕ್ರಸಾಲಿ, ಉಮೇಶ್ ಗುಂಡಗಟ್ಟಿ, ಕೊಟ್ರೇಶಪ್ಪ ಕೊಟ್ಟೂರು, ಶಿವಾನಂದ ಹಿರೇಮಠ, ವಿ.ವಿ.ಹರಪನಹಳ್ಳಿ, ಜಗದೀಶ್ ಮಳೆಮಠ, ಹಾಲಸಿದ್ದಯ್ಯ ಶಾಸ್ತ್ರಿ ಆನಂದ ಸ್ವಾಮಿ ಹಿರೇಮಠ, ಸೇರಿದಂತೆ ಸಮಿತಿಯ ಮತ್ತಿತರ ಗಣ್ಯರು, ಸದಸ್ಯರು, ಉಪಸ್ಥಿತರಿದ್ದರು ಸಂಸ್ಕೃತಿ ಪ್ರಸಾರ ಪರಿಷತ್ತಿನ ವಟುಗಳು ವೇದ ಘೋಷ ನೆರವೇರಿಸಿದರು ಗುಡ್ಡಪ್ಪ ಹಿಂದಿನ ಮನಿ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಉಪಾಧ್ಯಕ್ಷ ಬಿ.ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಸ್ತೂರಮ್ಮ ಪಾಟೀಲ್ ನಿರೂಪಿಸಿ, ಸ್ವಾಗತ ಸಮಿತಿಯ ಅಧ್ಯಕ್ಷ ಫಕೀರೇಶ ಭಸ್ಮಾಂಗಿಮಠ ವಂದಿಸಿದರು. ಧರ್ಮ ಜಾಗೃತಿ ಸಭೆಯಲ್ಲಿ 500ಕ್ಕೂ ಹೆಚ್ಚು ಪುರುಷರು,ಮಹಿಳೆಯರು, ಮತ್ತು ಭಕ್ತರು ಪಾಲ್ಗೊಂಡಿದ್ದರು.