ಇಂಡಿ

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ಪಟ್ಟಣಶೆಟ್ಟಿ

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ಪಟ್ಟಣಶೆಟ್ಟಿ
ಬಳ್ಳೊಳ್ಳಿ ಗ್ರಾಮದ ಸಮರ್ಥ ಗುರುಬಾಳೇಶ್ವರ ಮಠದ ಆವರಣದಲ್ಲಿ ಸತ್ಸಂಗ ಸಮಿತಿ ವತಿಯಿಂದ ಆಶಾ ಮತ್ತು ಆರೋಗ್ಯ ಇಲಾಖೆ ಸಿಬಂದಿ

ಇಂಡಿ 24:  ದೇಶದ ಜನರ ಪ್ರಾಣ ರಕ್ಷಣೆಗಾಗಿ ತಮ್ಮ ಜೀವವನ್ನೇ ಲೆಕ್ಕಿಸದೆ ಕರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಜೊತೆ ಆಶಾ ಕಾರ್ಯಕರ್ತರು ಸೇರಿಕೊಂಡು ಮನೆಮನೆಗೆ ತೆರಳಿ ಜನರಿಗೆ ತಿಳುವಳಿಕೆ ಹೆಳುವುದಲ್ಲದೆ ಜಾಗೃತಿ ಮೂಡಿಸುವ ಕಾರ್ಯ ಮಡಿದ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಎಂದು ಮಾಜಿ ಸಚಿವ ಅಪ್ಪಾಸಾಹೆಬ ಪಟ್ಟಣಶೆಟ್ಟಿ ಹೇಳಿದರು. 

ಗುರುವಾರ ಝಳಕಿ ಸಮೀಪದ ಬಳ್ಳೊಳ್ಳಿ ಗ್ರಾಮದ ಸಮರ್ಥ ಗುರುಬಾಳೇಶ್ವರ ಮಠದ ಆವರಣದಲ್ಲಿ  ಸತ್ಸಂಗ ಸಮಿತಿ ವತಿಯಿಂದ ಆಶಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 

ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆಗೂಡಿ ಸಾರ್ವಜನಿಕವಾಗಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸಿದ್ದಾರೆ. ಅವರ ಕಾರ್ಯ ನೋಡಿ ನಾವೂ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ಗೌರವ ಅನ್ನುವುದು ದುಡ್ಡುಕೊಟ್ಟರೆ ಬರುವದಿಲ್ಲ. ಸಮಾಜ ಸೇವೆ ಮಾಡಿದರೆ ಮಾತ್ರ ಗೌರವದ ಜೊತೆಗೆ ಸನ್ಮಾನ ಸಿಗುತ್ತದೆ. ಅವರ ಹೆಸರು ಅಜರಾಮರವಾಗಿ ಸಮಾಜದಲ್ಲಿ ಉಳಿಯುತ್ತದೆ ಎಂದು ಹೇಳಿದರು. 

ಭಿಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಮ್‌.ಆರ್‌. ಪಾಟೀಲ ಮಾತನಾಡಿ  ಆಶಾ ಮತ್ತು ಆರೋಗ್ಯ ಇಲಾಖೆ ದೇಶದಲ್ಲಿ ಭಯದ ವಾತಾವರಣದಲ್ಲಿ ಮನೆ ಮನೆಗೆ ಹೋಗಿ ಜನರಿಗೆ ಮನವಲಿಸಿ ವ್ಯಾಕ್ಸಿನ್ ನೀಡಿ, ಜನರ ಜೀವ ಉಳಿಸಿದ್ದಾರೆ. ಆದರಿಂದ ಇವರನ್ನು ಸಮಾಜ ಸೇವೆಯಲ್ಲಿ ತೊಡಗಿದ್ದು ನೋಡಿ ಎಲ್ಲರ ಮೆಚ್ಚುಗಗೆ ಪಾತ್ರ ರಾಗಿದ್ದು ಅವರ ಸೇವೆ ಅಗ್ರಗಣ್ಯವಾಗಿದೆ ಎಂದು ಹೇಳಿದರು. 

ನ್ಯಾಯವಾದಿ ಎಮ್‌.ಎಸ್‌. ತೇಲಿ, ರಾಘವೇಂದ್ರ ಕಾಪಸೆ, ಕಾಮಣ್ಣಗೌಡ ಬಿರಾದಾರ, ಗಿರಿಮಲ್ಲ ಮಾಲಗಾರ, ಶ್ರೀಶೈಲ ವಾಲಿ, ಅಶೋಕ ತೋಟದಾರ, ಸದಾಶಿವ ರೇವತಗಾಂವ, ಶಿವಶಂಕರ ತೇಲಿ, ಶ್ರೀಮಂತ ತೇಲಿ, ಪರಮೇಶ್ವರ ಶಿರಶ್ಯಾಡ, ಬಸವರಾಜ ತುಪ್ಪದ, ಕುಮಾರ ಜಾಧವ, ಸಂಭಾಜೀ ಜಾಧವ, ಬಸವರಾಜ ವಾಲಿಕಾರ, ರಾಜು ನಾಯ್ಕೋಡಿ, ಶ್ರೀಶೈಲ ಮೇತ್ರಿ, ಶ್ರೀಮತಿ ಅನ್ನಕ್ಕ ರೇವತಗಾಂವ, ಭಾರತಿ ಸರಗರ, ಸವಿತಾ ವಾಲಿ, ಸರೋಜಾ ಕಂಠಿ ಇದ್ದರು. 

ಸುದ್ದಿ ಓದಿ