ಬದುಕಿರುವವರೆಗೂ ಸಮಾಜದಲ್ಲಿ ಏನಾದರೊಂದು ಸಾಧಿಸಬೇಕು: ಉಜ್ಜಯಿನಿ ಜಗದ್ಗುರುಗಳು
ರಾಣೇಬೆನ್ನೂರು : ಜು 25- ಮಾನವ ಜನ್ಮ ತಾಳುವುದೇ ಅಪರೂಪ. ಬದುಕಿರುವವರೆಗೂ ಸಮಾಜದಲ್ಲಿ ಏನಾದರೊಂದು ಸಾಧಿಸಬೇಕು. ಅಂತಹ ಸಂಕಲ್ಪ ಪ್ರತಿಯೊಬ್ಬರು, ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕತೆ ಪಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಉಜ್ಜಯಿನಿ ಮಹಾ ಪೀಠದ 1008 ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳವರು ನುಡಿದರು. ಅವರು, ಗುರುವಾರ ತಾಲೂಕಿನ ಕೋಟಿಹಾಳ ಗ್ರಾಮದ, ಹೆತ್ತೋಡಲು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ, ಹಿರಿಯ ರಾಜಕಾರಣಿ, ಸಮಾಜ ಚಿಂತಕ ರುದ್ರಗೌಡ ಹಾ. ಪಾಟೀಲ್ ಅವರ 75ನೇ ಜನ್ಮದಿನೋತ್ಸವ ಹಾಗೂ ಐ ಹೆಚ್ ಪಾಟೀಲ್, ಕಂಪನಿಯ ಕಾರ್ಮಿಕರಿಗೆ ಆರೋಗ್ಯ ವಿಮಾ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಬದುಕಿನಲ್ಲಿ ಸಾಗುತ್ತಿರುವ ಇಂದಿನ ಮನುಷ್ಯನ ಜೀವನ ಬದುಕು ಸಂತೃಪ್ತಿ ಕಾಣದಂತಾಗಿದೆ. ಆದರೆ 75 ವರ್ಷಗಳನ್ನು ಪೂರೈಸಿರುವ ರುದ್ರಗೌಡರ ಜೀವನ, ಅತ್ಯಂತ ಸಂತೋಷ ಸಂತೃಪ್ತಿಯಿಂದ ಕೂಡಿರುವುದು ಅತ್ಯಂತ ಸಂತೋಷದ ಸಂಗತಿ. ಈ ಸಂತೋಷಕ್ಕೆ ಅವರು ಗ್ರಾಮ ಸಂಸ್ಕೃತಿಯಲ್ಲಿ ಬದುಕಿ, ಬಾಳಿ, ಎಲ್ಲರೂ ನಮ್ಮವರೇ ಎನ್ನುವ ಮನೋಭಾವನೆ ಈ ದೀರ್ಘಾಯುಷ್ಯ ಜೀವನಕ್ಕೆ ಮುಖ್ಯ ಕಾರಣ ಎಂದರು.
ಅಂದಿನ ಸಾತ್ವಿಕ ರಾಜಕಾರಣಿ ದಿ: ಐ.ಎಚ್. ಪಾಟೀಲ್ ಅವರು ಸೌಮ್ಯ ಸ್ವಭಾವದವರು. ಅವರ ಮಾರ್ಗದರ್ಶನವು , ರುದ್ರಗೌಡ್ರು ಮತ್ತು ಇಂದಿನ ವೈಚಾರಿಕ, ಪ್ರಗತಿಪರ ಚಿಂತನೆ ಹೊಂದಿರುವ ಯುವ ನಾಯಕ ಸಂತೋಷ್ ಕುಮಾರ್ ಪಾಟೀಲ್ ಅವರಲ್ಲಿಯೂ ಸಹ ಕಾಣಬಹುದಾಗಿದೆ ಎಂದ ಜಗದ್ಗುರುಗಳು, ಅವರ ಕುಟುಂಬದ ಜೊತೆ ಜಗದ್ಗುರು ಪೀಠವು ಸದಾಕಾಲ ಶುಭ ಮಂಗಲವನ್ನು ಕೋರುವುದು ಎಂದರು. ಕಾರ್ಯಕ್ರಮದ ಸಮ್ಮುಖದಲ್ಲಿದ್ದ ಸ್ಪಟಿಕಲಿಂಗ ಖ್ಯಾತಿಯ ರಂಭಾಪುರಿ ಶಾಖಾ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜಿ ಮಹಾರಾಜ್,ಅವರು, ರುದ್ರಗೌಡ ಪಾಟೀಲ್ ಅವರಿಗೆ ದೀರ್ಘಾಯುಷ್ಯವನ್ನು ಕೋರಿ, ಸಂದೇಶಾಮೃತವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಗದುಗಿನ ಡಿ. ಆರ್.ಪಾಟೀಲ್, ಬ್ಯಾಡಗಿಯ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶ್ ಗೌಡ್ರು ಪಾಟೀಲ್, ಶಿವರಾಜ ಸಜ್ಜನರ, ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಭಾರತಿ ಕುಮಾರ್ ಜಂಬಿಗಿ, ಜೀಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಮಾಜಿ ಸದಸ್ಯ ಶಂಕ್ರಣ್ಣ ಮಾತನವರ್ ,ಶಿಕಾರಿಪುರದ ರುದ್ರೇಶ, ಗ್ರಾಮ ಅಧ್ಯಕ್ಷ ಶ್ರೀಮತಿ ಕಮಲಮ್ಮ ಎಮ್ಮೆರ, ಸಹಕಾರಿ ಸಂಘದ ಅಧ್ಯಕ್ಷ ಈರನಗೌಡ ಯಡಚಿ, ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಕೋಟಿಹಾಳ್ ಮತ್ತು ಸುತ್ತಮುತ್ತಲ ಗ್ರಾಮದ ಮುಖಂಡರು, ಐ. ಹೆಚ್.ಪಾಟೀಲ್ ಕುಟುಂಬ ವರ್ಗದವರು ಗ್ರಾಮಸ್ಥರು, ನಾಡಿನ ಸಾವಿರಾರು ನಾಗರಿಕರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಐ.ಹೆಚ್ ಪಾಟೀಲ್ ಕಂಪನಿಯಲ್ಲಿ ಸೇವೆ ಸಲ್ಲಿಸುವ 200 ನೂರುಕ್ಕೂ ಹೆಚ್ಚು ನೌಕರರಿಗೆ ಲಕ್ಷಾಂತರ ರೊ ಮೌಲ್ಯದ ಆರೋಗ್ಯ ವಿಮಾ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ರಾಜಕೀಯ ಯುವ ನಾಯಕ ಸಂತೋಷ್ ಕುಮಾರ್ ಪಾಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣರಾಜ್ ನಿರೂಪಿಸಿ, ಸೋಮನಾಥ ವಂದಿಸಿದರು. ಗ್ರಾಮದಲ್ಲಿ, ಜಾನಪದ ಗಾಯಕ ಹನುಮಂತ ಲಮಾಣಿ ತಂಡದವರ ಕಾರ್ಯಕ್ರಮವು ಗ್ರಾಮೀಣ ನಾಗರಿಕರ ಮನ ಸಂತೋಷ ಪಡಿಸಿದರು